





ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ರಥ ಸಂಚಾರ ಕಾರ್ಯಕ್ರಮ ನಡೆಯಿತು.


ಶಾಸಕ ಅಶೋಕ್ ಕುಮಾರ್ ರೈ ಅವರು ಕಿಲ್ಲೆಮೈದಾನದಲ್ಲಿ ರಥಕ್ಕೆ ಚಾಲನೆ ನೀಡಿದರು. ರಥವು ಪುತ್ತೂರು ನಗರದಾದ್ಯಂತ ಸಂಚರಿಸಿತು. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪುಷ್ಪಾರ್ಚಣೆ ಕಾರ್ಯಕ್ರಮ ನಡೆಯಿತು.





ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಲನಾಧಿಕಾರಿ ಜೈಶಾಂತ್, ವಿಭಾಗೀಯ ಆಡಳಿತಾಧಿಕಾರಿ ತುಕಾರಾಮ್, ವಿಭಾಗೀಯ ಕಾರ್ಯಾಧ್ಯಕ್ಷ ಲೋಕೇಶ್ವರ, ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಮತ್ತು ಕನ್ನಡ ಕ್ರೀಯಾ ಸಮಿತಿ ಪದಾಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.










