





ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಅ.29 ರಂದು ಕಪಿತಾನಿಯೋ ಪ್ರೌಢಶಾಲೆ ಮಂಗಳೂರು ಇಲ್ಲಿ ನಡೆದ ಗ್ರಾಮೀಣ ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ (IT Quiz) ಸ್ಪರ್ಧೆಯಲ್ಲಿ ಭಾಗವಹಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


10ನೇ ತರಗತಿಯ ವಿದ್ಯಾರ್ಥಿಗಳಾದ ಅಭಿನ್ ಬಿ. ಎ (ಚಿಕ್ಕಮುಡ್ನೂರು ಆನಂದ ಬಿ.ಡಿ. ಮತ್ತು ಭಾರತಿ ಕೆ ಯವರ ಪುತ್ರ) ಪ್ರಹ್ಲಾದ್ ಗೌಡ (ಪಡ್ನೂರು ವಸಂತ ಗೌಡ ಮತ್ತು ರೇವತಿ ಎಂ ರವರ ಪುತ್ರ) ಹಾಗೂ ಶ್ರವಣ್ ಎಂ (ಕೋಡಿಂಬಾಡಿ ವಿಶ್ವಕುಮಾರ್ ಎಂ ಮತ್ತು ವೀಣಾ ಎಂ ದಂಪತಿಗಳ ಪುತ್ರ) ಇವರು ನ.3ರಂದು ಮೈಸೂರಿನ ಕರ್ನಾಟಕ ಕಲಾ ಮಂದಿರ, ಹುಣಸೂರು ಇಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ಗಾಯತ್ರಿ ಎಸ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.















