ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ

0

ಯುಜಿಸಿ, ಪ್ರೌಢಶಿಕ್ಷಣ ಆಯೋಗ, ತಾಂತ್ರಿಕ ಶಿಕ್ಷಣ ಮಂಡಳಿ ಸ್ಥಾಪಿಸಿದ ಖ್ಯಾತಿ ಮೌಲಾನ ಅಬುಲ್ ಕಲಾಂ ಅಜಾದ್ ರಿಗೆ ಸಲ್ಲುತ್ತದೆ :ಕೆ. ಎಂ. ಮುಸ್ತಫ

ಪುತ್ತೂರು: ಸುಳ್ಯದ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆಶ್ರಯದಲ್ಲಿ ಮೌಲಾನ ಅಬುಲ್ ಕಲಾಂ ಅಜಾದ್ ರವರ ಜನ್ಮ ದಿನಾಚರಣೆ, ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಯಿತು.


ಅಧ್ಯಕ್ಷತೆ ವಹಿಸಿದ್ದ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ, ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾದ ಮೌಲಾನ ಅಬುಲ್ ಕಲಾಂ ಅಜಾದ್ ರವರ ಶಿಕ್ಷಣ ದ ದೂರದೃಷ್ಟಿ ಇಂದು ನಮ್ಮ ದೇಶದ ಶಿಕ್ಷಣ ದ ಗುಣ ಮಟ್ಟ ವಿಶ್ವ ಮಾನ್ಯತೆ ಪಡೆಯಲು ಸಹಕಾರಿಯಾಗಿದೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕರಾದ ಇಲ್ಯಾಸ್ ಕಾಶಿಪಟ್ಟಣ ಮಾತನಾಡಿ, ಮೌಲಾನಾ ಅಬುಲ್ ಕಲಾಂ ರವರು ಸ್ವಾತoತ್ರ್ಯ ಹೋರಾಟದಲ್ಲಿ ವಹಿಸಿದ ಪಾತ್ರ ನಮಗೆ ಮಾರ್ಗ ದರ್ಶಿ ಎಂದರು.
ವೇದಿಕೆಯಲ್ಲಿ ಶಿಕ್ಷಕಿ ಯರಾದ ಜಯಂತಿ ಮತ್ತು ದೇವಕಿ ಉಪಸ್ಥಿತರಿದ್ದರು, ಶಿಕ್ಷಕ ರಂಜಿತ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here