ರಾಮಕುಂಜ: ಅಖಿಲ ಭಾರತೀಯ ಶಿಕ್ಷಣ ಸಂಸ್ಥೆ ವಿದ್ಯಾಭಾರತಿ ಕರ್ನಾಟಕ, ಮಂಗಳೂರು ಪಬ್ಲಿಕ್ ಪಿಯು ಕಾಲೇಜು ಹಾಸನ ಇವರ ಆಶ್ರಯದಲ್ಲಿ ನ.1,2,3ರಂದು ಮಂಗಳೂರು ಪಬ್ಲಿಕ್ ಪಿಯು ಕಾಲೇಜು ಹಾಸನ ಇಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾಭಾರತಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ನಮೃತ ಅವರು 3ಕಿಲೋಮೀಟರ್ ವೇಗದ ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಎಸ್ಜಿಎಫ್ಐಗೆ ಆಯ್ಕೆಯಾಗಿದ್ದಾರೆ.

ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ತರಬೇತಿ ನೀಡಿದ್ದರು. ಶಾಲಾ ಆಡಳಿತಾಧಿಕಾರಿ, ವ್ಯವಸ್ಥಾಪಕರು, ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಗುರುಗಳು, ಶಿಕ್ಷಕ ಶಿಕ್ಷಕೇತರ ವೃಂದದವರು ಶುಭ ಹಾರೈಸಿದ್ದಾರೆ. ಈಕೆ ಕಡಬ ತಾಲೂಕು ಬಲ್ಯ ನಿವಾಸಿ ಲೋಕೇಶ್ ಕೆ.ಮತ್ತು ಪ್ರಮೀಳಾ ದಂಪತಿ ಪುತ್ರಿ.