ದೇಲಂಪಾಡಿ: ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷ ಉಧ್ಯಮಿ ಬಿ. ವಸಂತ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಧಾರ್ಮಿಕ ಮುಂದಾಳು ಕ್ಷೇತ್ರದ ತಂತಿವರ್ಯರಲ್ಲಿ ಒಬ್ಬರಾಗಿರುವ ವೇದಮೂರ್ತಿ ಬ್ರಹ್ಮಶ್ರೀ ರವೀಶ ತಂತ್ರಿಯವರು ಔಪಚಾರಿಕವಾಗಿ ಸಭೆಯನ್ನು ಉದ್ಘಾಟಿಸಿ, ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ಚಿಂತನೆಯಂತೆ ನಡೆದು ಬಂದ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಶೀಘ್ರವೇ ಪುನಃ ಪ್ರತಿಷ್ಠೆಯಾಗಲಿರುವ ಮಹಾವಿಷ್ಣು ಗುಡಿ ಹಾಗೂ ಗಣಪತಿ ದೇವರಗುಡಿ ಇದರ ಪೂರ್ವಭಾವಿಯಾಗಿ ಆಗಬೇಕಾಗಿರುವ ಮಹತ್ವದ ಕೆಲಸಗಳನ್ನು ವಿವರಿಸಿದರು.
ಸಭೆಯಲ್ಲಿ ಪವಿತ್ರಪಾಣಿ ರಾಧಾಕೃಷ್ಣ ಭಾರಿತ್ತಾಯ, ಗಿರಿಧರ ರಾವ್, ಗಂಗಾಧರ ಕಾಡು, ಶ್ರೀಪತಿ ರಾವ್ ಗುಂಡಿಮನೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಎ. ಗೋಪಾಲ ಮಣಿಯಾಣಿ ಉಪಸ್ಥಿತರಿದ್ದು, ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಜಗದೀಶ ಪ್ರಸಾದ್ ವಾರ್ಷಿಕ ಅವಧಿಯ ಅಭಿವೃದ್ಧಿ ಕಾರ್ಯದ ಚಿತ್ರಣವನ್ನು ವಿವರಿಸಿದರು. ಜೊತೆ ಕಾರ್ಯದರ್ಶಿ ರವಿನಾರಾಯಣ ಮಿತ್ತೊಟ್ಟು ವರದಿ ವಾಚನವನ್ನು ಮಾಡಿದರು.
ಸಭೆಯನ್ನು ಉದ್ದೇಶಿಸಿ ಬೆಳ್ಳಿಪ್ಪಾಡಿ ಸದಾಶಿವ ರೈ, ಅತ್ತನಾಡಿ ರಾಮಚಂದ್ರ ಮಣಿಯಾಣಿ, ಅಡೂರು ಪ್ರಕಾಶ ರಾವ್, ಅಶೋಕ ನ್ಯಾಕ್ ಪಾಂಡಿ ಮೊದಲಾದ ಪ್ರಮುಖರು ಮಾತನಾಡಿ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ರವಿಶಂಕರ ನ್ಯಾಕ್ ಚಂದ್ರಬೈಲು, ರಾಮನ್ಯಾಕ್ ಅಡೂರು, ರಾಮುಂದೆ ಅಡೂರು, ಕೃಷ್ಣಪ್ಪ ಮಾಸ್ತರ್ ಅಡೂರು, ಬಾಲಕೃಷ್ಣ ಮಾಸ್ತರ್, ಗಂಗಾಧರ ಮಾಸ್ತರ್ ಮೂಲಡ್ಕ, ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ ಹಾಗೂ ವಿವಿಧ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದು, ಸಭೆಗೆ ಸಹಕಾರ ನೀಡಿದರು.ಸಮಿತಿಯ ಕಾರ್ಯದರ್ಶಿ ಪೆರಿಯಡ್ಕ ಚಂದ್ರಶೇಖರ ರಾವ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಕಾಂತಡ್ಕ ಗಂಗಾಧರ ರಾವ್ ವಂದಿಸಿದರು.