ವ್ಯಾಪಾರಿಗೆ ಬದಲಿ ಅಂಗಡಿ : ಶಾಸಕರ ಕಾರ್ಯಕ್ಕೆ ಮೆಚ್ಚುಗೆ

0

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಸೇಡಿಯಾಪು ಬಳಿ ರಸ್ತೆ ಮಾರ್ಜಿನ್ ನಲ್ಲಿ ಅಂಗಡಿ ಮಾಡಿ ವ್ಯಾಪಾರ ಮಾಡುತ್ತಿದ್ದ ಸ್ಥಳೀಯ ನಿವಾಸಿ ಸುಧಾಕರ್ ಎಂಬವರ ಅಂಗಡಿ ರಸ್ತೆ ಮಾರ್ಜಿನ್ ನಲ್ಲಿರುವ ಕಾರಣ ಅವರ ಅನಧಿಕೃತ ಅಂಗಡಿಯನ್ನು ತೆರವು ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯಿಂದ ಸೂಚನೆ ಬಂದಿದ್ದು, ಗ್ರಾ.ಪಂ ಈ ಬಗ್ಗೆ ಸುಧಾಕರ್ ಅವರಿಗೆ ಅಂಗಡಿ ತೆರವು ಮಾಡುವಂತೆ ಸೂಚನೆ ನೀಡಿತ್ತು.‌

ತನ್ನ ಆದಾಯದ ಏಕೈಕ ಮೂಲವಾಗಿದ್ದ ಅಂಗಡಿ ತೆರವಾಗುತ್ತಿರುವ ಬಗ್ಗೆ ಆತಂಕದಲ್ಲಿದ್ದ ಸುಧಾಕರ ಅವರು ಈ ಬಗ್ಗೆ ಗ್ರಾಪಂ ಗೆ ಬದಲಿ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಅವರಲ್ಲಿಯೂ ಸುಧಾಕರ್ ಮನವಿ ಮಾಡಿಕೊಂಡಿದ್ದರು. ಈ ವಿಚಾರವನ್ನು ಜಯಪ್ರಕಾಶ್ ಬದಿನಾರು ಶಾಸಕ ಅಶೋಕ್ ರೈ ಗಮನಕ್ಕೆ ತಂದಿದ್ದು, ಈ ವೇಳೆ ಶಾಸಕರು, ‘ಅಂಗಡಿ ತೆರವು ಆಗುತ್ತಿರುವ ಬಗ್ಗೆ ತಿಳಿದಿದೆ. ಅಂಗಡಿ ಮಾಲಕ ಳೆದ ಬಾರಿ ಗ್ರಾ.ಪಂ. ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ದವಾಗಿ ಕೆಲಸ ಮಾಡಿದ್ದರು ಎಂಬ ಬಗ್ಗೆಯೂ ತಿಳಿದಿದೆ. ಆದರೆ ಅವರಿಗೆ ತೊಂದರೆ ಕೊಡುವ ಕೆಲಸಕ್ಕೆ ಹೋಗಬೇಡಿ, ಅವರಿಗೆ ಬದಲಿ ವ್ಯವಸ್ಥೆ ಮಾಡಿ ಎಂದು ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಅವರಿಗೆ ಶಾಸಕರು ಸೂಚನೆ ನೀಡಿದರು ಎಂದು ತಿಳಿದು ಬಂದಿದೆ. ಶಾಸಕರ ಸೂಚನೆಯಂತೆ ಕೋಡಿಂಬಾಡಿ ಗ್ರಾ.ಪಂ ವತಿಯಿಂದ ಕೊಠಡಿಯೊಂದನ್ನು ಕಟ್ಟಲು ವ್ಯವಸ್ಥೆ ಮಾಡಲಾಗಿದ್ದು, ಶಾಸಕರ ಈ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಾವು ಕಾಂಗ್ರೆಸ್ಸಿಗರು, ಅನ್ಯಾಯ ಮಾಡುವುದು ನಮ್ಮ ಧರ್ಮವಲ್ಲ, ಚುನಾವಣಾ ಸಮಯದಲ್ಲಿ ನಮ್ಮ ವಿರುದ್ದವಾಗಿ ಕೆಲಸ ಮಾಡಿದ್ದರು, ಅವರ ಅಂಗಡಿಯನ್ನು ತೆರವು ಮಾಡುವ ಪೂರ್ಣ ಅಧಿಕಾರ ನಮ್ಮಲ್ಲಿತ್ತು ಆದರೆ ನಾವು ಹಾಗೆ ಮಾಡಲಿಲ್ಲ. ಶಾಸಕ ಅಶೋಕ್ ರೈ ಸೂಚನೆಯಂತೆ ಬದಲಿ ವ್ಯವಸ್ಥೆ ಮಾಡಿದ್ದೇವೆ ಇದಕ್ಕೆ ಅಂಗಡಿ‌ ಮಾಲಕರು ಕೃತಜ್ಞರಾಗಿರಬೇಕು.
ಜಯಪ್ರಕಾಶ್ ಬದಿನಾರು, ಗ್ರಾ.ಪಂ ಉಪಾಧ್ಯಕ್ಷರು, ಕೋಡಿಂಬಾಡಿ

LEAVE A REPLY

Please enter your comment!
Please enter your name here