“ಬ್ಯಾಟಲ್ ಆಫ್ ಬೀಟ್ಸ್ ” ಸಂಗೀತ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ದ್ವಿತೀಯ

0

ಪುತ್ತೂರು: ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜು,ಮಂಗಳೂರು  ಇವರು ಏರ್ಪಡಿಸಿದ್ದ ರಾಜ್ಯಮಟ್ಟದ ಅಂತರ್ ಶಾಲಾ ಜೆಮಿಂಗ್ ಸ್ಪರ್ಧೆ “ಬ್ಯಾಟಲ್ ಆಫ್ ಬೀಟ್ಸ್ ”  ಸಂಗೀತ ಸ್ಪರ್ಧೆಯು ನವಂಬರ್ 7ರಂದು ನಡೆಯಿತು.

 ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಸುಪ್ರಜಾ ರಾವ್ (ಡಾಕ್ಟರ್ ಪ್ರಶಾಂತ್ ರಾವ್ ಮತ್ತು ಸುಮನ ದಂಪತಿಗಳ ಪುತ್ರಿ ),ಮಯೂರಿ ಕೆ (ಉದಯ ರವಿ ಕೆ ಮತ್ತು ಶ್ವೇತ ಕೆ ದಂಪತಿಗಳ ಪುತ್ರಿ), ಸಾತ್ಯಕಿ ಹೆಬ್ಬಾರ್ (ಸುಹಾಸ್ ಹೆಬ್ಬಾರ್ ಮತ್ತು ಶ್ರೀಲತಾ ದಂಪತಿಗಳ ಪುತ್ರ),  ಓಂಕಾರ್ ಮಯ್ಯ (ಏ ಜಯಶೇಖರ್ ಮಯ್ಯ ಮತ್ತು ಲೀಲಾ ಮಯ್ಯ ದಂಪತಿಗಳ ಪುತ್ರ),  ಸಿರಿ ಹಿಳ್ಳೆ ಮನೆ (ಶಿವಕುಮಾರ್ ಹೆಚ್ ಮತ್ತು ಸಹನಾ ಶಿವಕುಮಾರ್ ಹೆಚ್  ದಂಪತಿಗಳ ಪುತ್ರಿ),  ದೀಪ್ತಿ ಕುಬಣೂರಾಯ(ಸುಧಾಕರ ಕುಬಣೂರಾಯ ಮತ್ತು ಸವಿತಾ ಕುಬಣೂರಾಯ  ದಂಪತಿಗಳ ಪುತ್ರಿ) ಅನುಸೂಯಾ ಭಟ್ (ಮಂಜುನಾಥ್ ಭಟ್ ಮತ್ತು ಸುವರ್ಣ ಗೌರಿ ದಂಪತಿಗಳ ಪುತ್ರಿ ), ಅದ್ವಿತ್ ರಾವ್ (ಏನ್ ಬಿ ಪ್ರವೀಣ ಕುಮಾರ ಮತ್ತು ಮಧುಮಿತಾ ರಾವ್ ಪಡುಮಲೆ ದಂಪತಿಗಳ ಪುತ್ರ ) ಇವರು ಭಾಗವಹಿಸಿ ದ್ವಿತೀಯ ಸ್ಥಾನದೊಂದಿಗೆ ರೂ.10000/-ಗಳ ನಗದು ಪುರಸ್ಕಾರವನ್ನು ಪಡೆದಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಅವರು ತಿಳಿಸಿರುತ್ತಾರೆ. 

LEAVE A REPLY

Please enter your comment!
Please enter your name here