ಬಡಗನ್ನೂರು: ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಠಾರದಲ್ಲಿ ಪಟ್ಟೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಡಿ.6ರಂದು ನಡೆಯಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಆಮಂತ್ರಣ ಪತ್ರಿಕೆ ಬಿಡುಗಡೆ ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ ರೈ ಅರೆಪ್ಪಾಡಿ ಗೌರವಾಧ್ಯಕ್ಷ, ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ದ್ವಾರಕ, ಸಂಚಾಲಕ ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ, ಉಪಾಧ್ಯಕ್ಷರಾದ ರಾಜಗೋಪಾಲ ಭಟ್ ಪಟ್ಟೆ, ರಘುರಾಮ ಪಾಟಾಳಿ ಶರವು, ಜೊತೆ ಕಾರ್ಯದರ್ಶಿಗಳಾ ಗುರುಪ್ರಸಾದ್ ಉಳಯ, ಶಶಿಧರ ಪಟ್ಟೆ, ಕೋಶಾಧಿಕಾರಿ ಸುಬ್ಬಪ್ಪ ಪಾಟಾಳಿ ಪಟ್ಟೆ ಸಂಘಟನಾ ಕಾರ್ಯದರ್ಶಿ ಲಿಂಗಪ್ಪ ಗೌಡ ಮೋಡಿಕೆ, ಗೌರವ ಸಲಹೆಗಾರರಾದ ನಾರಾಯಣ ಗೌಡ ಉಳಯ, ಡಾ|ಹರಿಪ್ರಸಾದ್ ರೈ ಪಟ್ಟೆ, ನಾರಾಯಣ ಪಾಟಾಳಿ ಪಟ್ಟೆ, ಜಯರಾಮ ಪಾಟಾಳಿ ಪಟ್ಟೆ, ಹಾಗೂ ಶಂಕರಿ ನಾರಾಯಣ ಪಾಟಾಳಿ ಪಟ್ಟೆ ರಾಮಚಂದ್ರಪ್ಪ ಪಟ್ಟೆ ಗೋವಿಂದ ಭಟ್ ಕಜಮೂಲೆ, ಪಟ್ಟೆ ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್, ನಿವೃತ್ತ ಮುಖ್ಯ ಶಿಕ್ಷಕಿ ಯಮೂನ ವೖೆಕೆ ಪಟ್ಟೆ, ಹಾಗೂ ರವಿಂದ್ರ ನಾಯ್ಕ ಪಟ್ಟೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.