





ಪುತ್ತೂರು: ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಕಾಮಜಲು ಇಲ್ಲಿ ಕಲಿಯುತ್ತಿರುವ 45 ವಿದ್ಯಾರ್ಥಿಗಳಿಗೆ ಪುತ್ತೂರಿನಲ್ಲಿ ಜವುಳಿ ಉದ್ಯಮದಲ್ಲಿ ಹೆಸರಾಂತ ಮಳಿಗೆಯಾದ ರಾಧಾಸ್ ಟೆಕ್ಸಟೈಲ್ಸ್ ಕೋರ್ಟ್ ರಸ್ತೆ ಪುತ್ತೂರು ಇವರು ಉಚಿತವಾಗಿ ಒದಗಿಸಿಕೊಟ್ಟ ಟ್ರ್ಯಾಕ್ ಪ್ಯಾಂಟ್ ಮತ್ತು ಟಿ ಶರ್ಟ್ ಇತ್ತೀಚೆಗೆ ವಿತರಿಸಲಾಯಿತು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ್ ಬಾಳೆಕಲ್ಲು ಇವರು ಸಮವಸ್ತ್ರವನ್ನು ವಿತರಿಸಿ ಮಾತನಾಡುತ್ತಾ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಇಂತಹ ಕೊಡುಗೆಗಳನ್ನು ಕೊಟ್ಟ ರಾಧಾಸ್ ಟೆಕ್ಟೈಲ್ಸ್ ನವರ ಕೊಡುಗೆ ಶ್ಲಾಘನೀಯ” ಎಂದು ಹೇಳಿದರು.





ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುಂದರ ಕುಲಾಲ್ ಪಿ ಇವರು ಮಾತನಾಡುತ್ತಾ, ನಮ್ಮ ಶಾಲೆಯ ಬಡ ಮಕ್ಕಳಿಗೆ ಉಚಿತ ಟ್ರ್ಯಾಕ್ ಪ್ಯಾಂಟ್ ಮತ್ತು ಟಿ ಶರ್ಟ್ ಅನ್ನು ಕೊಡುಗೆಯಾಗಿ ನೀಡಿದ ರಾಧಾಸ್ ಟೆಕ್ಸ್ ಟೈಲ್ಸ್ ಇನ್ನೂ ಅನೇಕ ಕಡೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು .
ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮೋಹನ್ ಕುಲಾಲ್, ಶ್ರೀ ಕ್ಷೇತ್ರ ಕುಕ್ಕಾಜೆ ಇಲ್ಲಿನ ಮೊಕ್ತೇಸರರಾದ ಶ್ರೀಯುತ ಎಂ ಕೆ ಕುಕ್ಕಾಜೆ, ಕೆ ಎಫ್ ಸಿ ಮಾಣಿಲ ಇದರ ಸದಸ್ಯರಾದ ಶ್ರೀಧರ್ ಪಿ ಕೆ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಭಾರ ಮುಖ್ಯಶಿಕ್ಷಕಿ ಸುಧಾ ಸಂದೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.ಶಿಕ್ಷಕರುಗಳಾದ ಮಾಲತಿ ಎನ್, ಕುಮಾರಿ ಸುಷ್ಮಿತಾ ಕೆ ಹಾಗೂ ಮಾಲತಿ ಡಿ ಸಹಕರಿಸಿದರು.










