ಬೊಳುವಾರು ಮಿಷನ್‌ಗುಡ್ಡೆ ಮೀನಾಕ್ಷಿಯವರ ಶ್ರದ್ದಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ, ಬೊಳುವಾರು ಮಿಷನ್‌ಗುಡ್ಡೆ ನಿವಾಸಿ ನಿವೃತ್ತ ಪ್ರಾಂಶುಪಾಲ ದಿ. ಎಂ. ಅಣ್ಣಪ್ಪರವರ ಪತ್ನಿ ಮೀನಾಕ್ಷಿಯವರ ಶ್ರದ್ಧಾಂಜಲಿ ಸಭೆಯು ನ.8ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಭಾ ಭವನದಲ್ಲಿ ನಡೆಯಿತು.


ನುಡಿ ನಮನ ಸಲ್ಲಿಸಿದ ಬೆಳ್ತಂಗಡಿ ಗುರುದೇವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ ಮಾತನಾಡಿ, ಸಮಾಜ ಮುಖಿಯಾಗಿ ಬದುಕಿ ಬಾಳಿದ ಮೀನಾಕ್ಷಿಯವರು ಸಮಾಜವನ್ನು ತನ್ನ ಪ್ರೀತಿಯ ತೆಕ್ಕೆಯೊಳಗೆ ಸೇರಿಸಿಕೊಂಡವರು. ಅವರು ಜನಾನುರಾಗಿ ತಾಯಿಯಾಗಿದ್ದರು. ಶರಣರ ಗುಣವನ್ನು ಅವರ ಮರಣದಲ್ಲಿ ಕಾಣಬೇಕು ಎಂಬಂತೆ ಮೀನಾಕ್ಷಿಯವರ ಮರಣದ ದಿನ ಸೇರಿದ್ದ ಜನಸಂಖ್ಯೆಯಿಂದ ಅವರ ಗುಣವನ್ನು ತಿಳಿದುಕೊಳ್ಳಲು ಸಾಕ್ಷಿಯಾಗಿತ್ತು. ನಿರ್ಮಲ ಮನಸ್ಸಿನ ಸಂಸ್ಕಾರ ಮೈಗೂಡಿಸಿಕೊಂಡವರು. ಆದರ್ಶಯುತ ಸಾಧನೆ ಮಾಡಿದವರು. ಸಂತೋಷದಿಂದಲೇ ಅವರು ಈ ಪ್ರಪಂಚದ ಬಿಟ್ಟು ಹೋಗಿದ್ದು ಅವರ ಆತ್ಮರ ಪರಮಾತ್ಮನಲ್ಲಿ ಸಾಯುಜ್ವವಾಗಿರಲಿ ಎಂದು ಪ್ರಾರ್ಥಿಸಿದರು.


ಚೇತನಾ ಆಸ್ಪತ್ರೆಯ ಡಾ. ಜೆ.ಸಿ ಅಡಿಗ, ಆದರ್ಶ ಆಸ್ಪತ್ರೆಯ ಡಾ.ಸುಬ್ರಾಯ ಭಟ್, ಡಾ.ಅಜಿತ್ ಆಳ್ವ, ಡಾ.ಹರೀಶ್ ನಾಯ್ಕ್ ಮೂಡಬಿದರೆ, ಡಾ. ವಿನಯ ಕುಮಾರ್ ಹೆಗ್ಡೆ, ನಿಶ್ಮಿತಾ ಮೋಟಾರ‍್ಸ್ ಮ್ಹಾಲಕ ನಾರಾಯಣ ಪಿ.ಎಚ್., ಬಿಜೆಪಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ ರೆಂಜ, ಅಕ್ಷಯ ಸಮೂಹ ಸಂಸ್ಥಗಳ ಆಡಳಿತ ನಿರ್ದೇಶಕ ಜಯಂತ ನಡುಬೈಲು, ಬಳಕ್ಕ ಬಂಗೇರ ತರವಾಡು ಮನೆಯ ಮಾಧವ ಬಂಗೇರ, ಸುಭಾಶ್ಚಂದ್ರ ಜೈನ್, ಅಣ್ಣಿ ಪೂಜಾರಿ, ಉಸ್ಮಾನ್, ಗಣಪತಿ ನಾಯಕ್, ಉಷಾ, ಹರೀಶ್ ಶೆಟ್ಟಿ, ಸುರೇಶ್ ಮಲ್ಯ, ಯಶವಂತ ಭಟ್, ರತ್ನಶೇಖರ ಆಚಾರ್ಯ, ಶ್ರೀಧರ ಸಪಾಲಿ ಗ್ರೂಪ್ ಸೋಮವಾರಪೇಟೆ, ಸುಂದರ ಸುವಿದ್ ಕಂಪರ್ಟ್ಸ್ ಸೋಮವಾರಪೇಟೆ, ಸೋಮಶೇಖರ ಸೋಮವಾರಪೇಟೆ, ಶೇಖರ ನಾರಾವಿ, ಸತ್ಯಸಾಯಿ ಸೇವಾ ಸಮಿತಿಯ ಮಾಧವ ನಾಯಕ್, ಪ್ರಸನ್ನ ಭಟ್, ಶಾಂತಾರಾಮ ರಾವ್, ಎಂ.ಎನ್ ಚೆಟ್ಟಿಯಾರ್, ರವಿಶಂಕರ ಶೆಟ್ಟಿ, ನಬಾರ್ಡ್ ರಮೇಶ್ ತೆಂಕಿಲ, ಬಿಲ್ಲವ ಸಂಘದ ಉಪಾಧ್ಯಕ್ಷ ಚಿದಾನಂದ ಸುವರ್ಣ, ಕಾರ್ಯದರ್ಶಿ ಮಹೇಶ್ವಂದ್ರ ಸಾಲ್ಯಾನ್, ಜಾನ್ ಕುಟಿನ್ಹಾ, ರಾಜ್ ಬೊಳುವಾರು ಸಹಿತ ಮೃತರ ಮನೆಯವರಾದ ರತನ್ ಕುಮಾರ್, ಶೋಭಾ ರತನ್, ಸಮನಾ ಕಮಲಾಕ್ಷ, ಸುಚೇತ, ಜಯರಾಮ ಕೋಟ್ಯಾನ್ ಸಹಿತ ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here