ಪುತ್ತೂರು: ಉಪ್ಪಿನಂಗಡಿ ರಾಮನಗರದ ಚಂದ್ರ ನಿವಾಸದಲ್ಲಿ ವಾಸ ವಾಸವಾಗಿದ್ದ, ದಿವಂಗತ ರಾಮಚಂದ್ರ ಹೆಗ್ಡೆಯವರ ಪತ್ನಿ ವಾಗ್ದೇವಿ ಹೆಗ್ಡೆ ( 81)ಅವರು,ಅಸೌಖ್ಯದ ಕಾರಣ ದಿಂದ ನವೆಂಬರ್ 02 ರಂದು ಸ್ವಗ್ರಹದಲ್ಲಿ ನಿಧನರಾಗಿದ್ದು, ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.
ಗಾಂಧಿ ಪಾರ್ಕ್ ನ ಕೆ ಸುಧಾಕರ್ ಶೆಟ್ಟಿ ಮಾತನಾಡಿ, ವಾಗ್ದೇವಿ ಹೆಗ್ಡೆ ಅವರ ಜೀವನದ ಪಯಣದ ಕುರಿತು ತಿಳಿಸಿ ಶ್ರದ್ದಾಂಜಲಿ ಅರ್ಪಿಸಿದರು.ಸಭೆಯಲ್ಲಿ ಇಬ್ಬರು ಗಂಡು ಮಕ್ಕಳು, ಮಗಳು ಅಳಿಯ ಮತ್ತು ಮೊಮ್ಮಕ್ಕಳು, ಬಂದು ಮಿತ್ರರು ಉಪಸ್ಥಿತರಿದ್ದರು.
