ಕೆಯ್ಯೂರು: ರೋಯಲ್ ಸೌಹಾರ್ದ ಸಹಕಾರಿ ಸಂಘದ ಸಲಹಾ ಸಮಿತಿಯ ಸಭೆ – ಅಧ್ಯಕ್ಷರಾಗಿ ಉಮಾಕಾಂತ್ ಬೈಲಾಡಿ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಮೇರ್ಲ

0

ಪುತ್ತೂರು: ರೋಯಲ್ ಸೌಹಾರ್ದ ಸಹಕಾರಿ ಸಂಘದ ಸಲಹಾ ಸಮಿತಿಯ ಸಭೆ ಸಂಘದ ಅಧ್ಯಕ್ಷರಾದ ಎ. ಕೆ. ಜಯರಾಮ ರೈ ರವರ ಅಧ್ಯಕ್ಷತೆಯಲ್ಲಿ ಕೆಯ್ಯೂರು ವರ್ತಕರ ಸಂಘದ ಕಚೇರಿಯಲ್ಲಿ ನ.7ರಂದು ನಡೆಯಿತು.


ಸಭೆಯಲ್ಲಿ ಶಾಖಾ ಸಲಹಾ ಸಮಿತಿಯ ಅಧ್ಯಕ್ಷರಾಗಿ ಉಮಾಕಾಂತ್ ಬೈಲಾಡಿ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಮೇರ್ಲ, ಸದಸ್ಯರಾಗಿ ರಮೇಶ್ ರೈ ಬೋಲೋಡಿ, ಸಂತೋಷ್ ಕುಮಾರ್ ಇಳಂತಾಜೆ, ಉಸೈನರ್ (ಸಂತೋಷ್ ನಗರ), ಭವಾನಿ ಬಾಲಕೃಷ್ಣ ಪಳತಡ್ಕ, ಶಿವಶ್ರೀ ರಂಜನ್ ರೈ ದೇರ್ಲ, ದಿವಾಕರ ರೈ ಸಣಂಗಳ, ಬಾಲಕೃಷ್ಣ ರೈ ನೆಟ್ಟಾಳ, ಬಟ್ಯಾಪ್ಪ ರೈ ದೇರ್ಲ, ಜಯಂತ ಪೂಜಾರಿ ಕೆ, ಶೇಖರ ಪರವ ರವರು ಆಯ್ಕೆಯಾದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶವಂತ್ ಕುಮಾರ್ ಸ್ವಾಗತಿಸಿ, ಸಹಕಾರಿಯ ನಿರ್ದೇಶಕ ಆನಂದ ಪಿ. ವಂದಿಸಿದರು. ಸಭೆಯಲ್ಲಿ ಸಹಕಾರಿಯ ನಿರ್ದೇಶಕರಾದ ವಾಣಿಶ್ರೀ ಡಿ., ಬಾಬು ಗೌಡ, ವಿಶ್ವನಾಥ ನಾಯ್ಕ, ಹಾಗೂ ಪುತ್ತೂರು ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಪೂಜಾರಿ ಕೆ. ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here