





ಪುತ್ತೂರು: ಬೆಂಗಳೂರಿನ ಕ್ವಾಡ್ರಾಂಗಲ್ ಗೇಟ್ ಕ್ಯಾಂಪಸ್ ಆಯೋಜನೆಯಲ್ಲಿ ಬೆಂಗಳೂರಿನಲ್ಲಿ ಅ.27 ಮತ್ತು 28ರಂದು ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ 60 ಕೆ.ಜಿ ವಿಭಾಗದಲ್ಲಿ ಕೆಯ್ಯೂರಿನ ಧವನ್ ರೈ ಎಸ್ರವರು ರಾಜ್ಯಮಟ್ಟದ ಅತ್ಯುತ್ತಮ ದೇಹದಾರ್ಢ್ಯ ಚಾಂಪಿಯನ್ ಶಿಫ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇದಲ್ಲದೆ ನ.7 ಮತ್ತು 8 ರಂದು ಬೆಂಗಳೂರಿನ ಆರ್ವಿಐಟಿಐ ಕಾಲೇಜು ಆಯೋಜಿಸಿದ ವಿಟಿಯು ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 59 ಕೆಜಿ ವಿಭಾಗದ ವಿಟಿಯಯ ರಾಜ್ಯಮಟ್ಟದ ಪವರ್ಲಿಪ್ಟಿಂಗ್ನಲ್ಲಿ ಚಾಂಪಿಯನ್ಶಿಪ್ನಲ್ಲಿ ಸ್ಕ್ವಾಚ್ 172.5 ಕೆಜಿ, ಬೆಂಚ್ಪ್ರೆಸ್ 97.5 ಕೆಜಿ, ಡೆಡ್ಲಿಪ್ಟ್ 195 ಕೆಜಿ ಒಟ್ಟು 465 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.



ಧವನ್ ರೈ ಎಸ್ರವರು ಮಂಗಳೂರು ವಾಮಂಜೂರು ಸೈಂಟ್ ಜೋಸೆಪ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿದ್ದಾರೆ. ಕೆಯ್ಯೂರು ಗ್ರಾಮದ ಸಣಂಗಳ ನಿವಾಸಿ ಕ್ಯಾಂಪ್ಕೋ ಉದ್ಯೋಗಿ ರಾಧಾಕೃಷ್ಣ ರೈ ಮತ್ತು ಸವಿತಾರವರ ಪುತ್ರರಾಗಿದ್ದಾರೆ.













