ಪುತ್ತೂರು:ಒಕ್ಕಲಿಗ ಸ್ವ ಸಹಾಯ ಟ್ರಸ್ಟ್(ರಿ )ಪುತ್ತೂರು ಇದರ ದಶಮಾನೋತ್ಸವದ ಸವಿನೆನಪಿಗಾಗಿ ಜ 4 ರಂದು ಲೋಕಾರ್ಪಣೆಗೊಂಡ ನೆಲ್ಲಿಕಟ್ಟೆಯಲ್ಲಿರುವ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ನೂತನ ಸಭಾ ಭವನಕ್ಕೆ ರೂ 10000/- ಕ್ಕೆ ಮೇಲ್ಪಟ್ಟು ದೇಣಿಗೆ ನೀಡಿದವರ ವಿವರದ ಅಮೃತ ಶಿಲೆಯ ನಾಮಫಲಕಗಳ ಉದ್ಘಾಟನಾ ಸಮಾರಂಭ ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ನೂತನ ಸಭಾಭವದಲ್ಲಿ ನ 14 ಬೆಳಿಗ್ಗೆ 9. 30 ಕ್ಕೆ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿ ವಿ ಮನೋಹರ್ ವಹಿಸಲಿದ್ದು,ಉದ್ಘಾಟನೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು,ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರಾದ ಸಂಜೀವ ಮಟ೦ದೂರು ನೆರವೇರಿಸಲಿದ್ದು,ಮುಖ್ಯ ಅತಿಥಿಗಳಾಗಿ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ರವಿ ಮುಂಗ್ಲಿಮನೆ,ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಎ ವಿ ನಾರಾಯಣ,ಒಕ್ಕಲಿಗ ವಿವಾಹ ವೇದಿಕೆಯ ಸಂಯೋಜಕರಾದ ಸುರೇಶ್ ಕಲ್ಲಾರೆ ,ಪುತ್ತೂರು ತಾಲೂಕು ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷರಾದ ವಾರಿಜಾ ಬಿಳಿಯಪ್ಪ ಗೌಡ, ಒಕ್ಕಲಿಗ ಗೌಡ ಯುವ ಸಂಘದ ಅಧ್ಯಕ್ಷರಾದ ಅಮರನಾಥ ಗೌಡ ಭಾಗವಹಿಸಲಿದ್ದಾರೆ.ಹಾಗೂ ಈ ಕಾರ್ಯಕ್ರಮದ ಬಳಿಕ ಬೆಳಿಗ್ಗೆ 10.30 ರಿಂದ ಒಕ್ಕಲಿಗ ಸ್ವ ಸಹಾಯ ಸಂಘದ ಒಕ್ಕೂಟಗಳ ಕೇಂದ್ರ ಸಮಿತಿಯ ಸಭೆ ನಡೆಯಲಿದೆ ಎಂದು ಪುತ್ತೂರು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.