





ಪುತ್ತೂರು: ಉಪ್ಪಿನಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ನೇಮಕವಾಗಿದ್ದಾರೆ.


ಕೋಡಿಂಬಾಡಿ ಗ್ರಾಮದ ಕಾಂತಳಿಕೆ ನಿವಾಸಿಯಾಗಿರುವ ಮಲ್ಲಿಕಾ ಅಶೋಕ್ ಅವರು ಸಾಮಾಜಿಕವಾಗಿ ಕ್ರಿಯಾಶೀಲರಾಗಿದ್ದು ಕೋಡಿಂಬಾಡಿ ಬಿಲ್ಲವ ಮಹಿಳಾ ಗ್ರಾಮ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಸರಕಾರದ ಅನುದಾನ ಸದ್ಬಳಕೆ, ಸ್ವಚ್ಛತಾ ಆಂದೋಲನ ಸಹಿತ ವಿವಿಧ ಅಭಿವೃದ್ಧಿ ಕಾರ್ಯದ ಸಾಧನೆಗಾಗಿ ಮಲ್ಲಿಕಾ ಅಶೋಕ್ ಅವರ ನೇತೃತ್ವದ ಕೋಡಿಂಬಾಡಿ ಗ್ರಾಮ ಪಂಚಾಯತ್ ಕಳೆದ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿತ್ತು. ಇವರ ಸಂಘಟನೆಯ ಕಾರ್ಯ ವೈಖರಿಯನ್ನು ಗಮನಿಸಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಅವರ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಉಷಾ ಅಂಚನ್ ಈ ನೇಮಕ ಮಾಡಿದ್ದಾರೆ.












