





ಪುತ್ತೂರು: ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ (ರಿ) ಪುತ್ತೂರು ಇದರ ವಾರ್ಷಿಕ ಮಹಾಸಭೆ ನೆಲ್ಲಿಕಟ್ಟೆ ಈಶ ವಿದ್ಯಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.



ಸಭೆಯಲ್ಲಿ 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ವೆಂಕಟೇಶ್ ಪ್ರಸಾದ್ ಹಾಗೂ ಆಯ-ವ್ಯಯವನ್ನು ಕೋಶಾಧಿಕಾರಿ ಪ್ರೇಮಾ ವಾಸುದೇವ ಮಂಡಿಸಿದರು. 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದು, ಅಧ್ಯಕ್ಷರಾಗಿ ಪ್ರಭಾವತಿ, ಉಪಾಧ್ಯಕ್ಷರಾಗಿ ನೇಮಿರಾಜ್ ರೈ ಕುಂಬ್ರ, ಕಾರ್ಯದರ್ಶಿಯಾಗಿ ಪ್ರೇಮಾ ವಾಸುದೇವ, ಜತೆ ಕಾರ್ಯದರ್ಶಿಯಾಗಿ ನಳಿನಿ ಜಗನ್ನಾಥ್, ಕೋಶಾಧಿಕಾರಿಯಾಗಿ ಆಶಾ ಯೋಗೀಶ್, ಗೌರವ ಸಲಹೆಗಾರರಾಗಿ ದಿವಾಕರ ಶೆಟ್ಟಿ ಕುಂಬ್ರ,ಸುಬ್ಬಯ್ಯ ರೈ ಪಡುಮಲೆ, ಹೊನ್ನಮ್ಮ ನೆಕ್ಕಿಲು ಬನ್ನೂರು, ಮಾಧ್ಯಮ ಪ್ರತಿನಿಧಿಯಾಗಿ ಧನುಷಾ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ವೆಂಕಟೇಶ್ ಪ್ರಸಾದ್ ಆಯ್ಕೆಯಾದರು.





ಬಳಿಕ ನಡೆದ ನೂತನ ಪದಾಧಿಕಾರಿಗಳ “ಪದಗ್ರಹಣ” ಕಾರ್ಯಕ್ರಮವನ್ನು ದೀಪ ಬೆಳಗಿ, ಉದ್ಘಾಟಿಸಿದ ವೈಷ್ಣವಿ ವೈದೇಹಿ ಭಜನಾ ಮಂಡಳಿಯ ಅಧ್ಯಕ್ಷೆ, ಹಿರಿಯ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕರ್ತೆ ಪ್ರೇಮಲತಾ ರಾವ್, ಕಲಿಯುಗದಲ್ಲಿ ಭಗವಂತನ ಉಪಾಸನೆಯ ಸರಳ ಮಾರ್ಗ ಭಜನೆ. ಭಜನೆಯಿಂದ ಪ್ರಶಾಂತ ಮನೋಭಾವ ಮೂಡುತ್ತದೆ,ಮಂಡಳಿಯ ಸದಸ್ಯರು ಸಮವಸ್ತ್ರ ಧರಿಸಿದಾಗ ಮನಸ್ಸಿನಲ್ಲಿ ಸಮತಾಭಾವ ಮತ್ತು ಏಕತಾ ಮನೋಭಾವ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಕಳೆದ ಸಾಲಿನ ಆಯ-ವ್ಯಯ, ಲೆಕ್ಕಪತ್ರಗಳ ದಾಖಲೆಗಳನ್ನು ನೂತನ ಸಮಿತಿಗೆ ಹಸ್ತಾಂತರ ಮಾಡಲಾಯಿತು.

ಸಂಚಾಲಕರಾದ ಡಾ. ಗೋಪಾಲಕೃಷ್ಣ ಎಂ, ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಡಾಲ ಹಾಗೂ ನೂತನ ಅಧ್ಯಕ್ಷೆ ಪ್ರಭಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಹಾರೈಸಿದರು. ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.










