ನೆಲ್ಯಾಡಿ: ದ.ಕ.ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೆಲ್ಯಾಡಿ ಗ್ರಾ.ಪಂ.ಸದಸ್ಯೆ ಉಷಾಜೋಯಿ ನೇಮಕಗೊಂಡಿದ್ದಾರೆ.
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರ ಆದೇಶದ ಮೇರೆಗೆ ದ.ಕ.ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಅವರು ಈ ನೇಮಕ ಮಾಡಿ ಆದೇಶಿಸಿದ್ದಾರೆ. ಉಷಾಜೋಯಿ ಅವರು ಕಳೆದ 10ವರ್ಷಗಳಿಂದ ನೆಲ್ಯಾಡಿ ಗ್ರಾ.ಪಂ.ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಡಬ ತಾ.ಪಂ.ಕೆಡಿಪಿ ಸದಸ್ಯೆಯಾಗಿ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರ್ಷಾ ಸಮಿತಿ ಸದಸ್ಯೆಯಾಗಿ, ನೆಲ್ಯಾಡಿ ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ನಾಮನಿರ್ದೇಶಿತ ಸದಸ್ಯೆಯಾಗಿ, ನೆಲ್ಯಾಡಿ ಸೈಂಟ್ ತೋಮಸ್ ಚರ್ಚ್ನ ಆಡಳಿತ ಕಮಿಟಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯೆಯಾಗಿ, ಡಿಕೆಆರ್ಡಿಎಸ್ ಬೆಳ್ತಂಗಡಿ ಇದರ ಮಹಿಳಾ ಘಟಕದ ಕಡಬ ತಾಲೂಕು ಒಕ್ಕೂಟದ ಅಧ್ಯಕ್ಷೆಯಾಗಿ 2 ಅವಧಿ ಸೇವೆ ಸಲ್ಲಿಸಿದ್ದರು. ಇವರು ನೆಲ್ಯಾಡಿ ಗ್ರಾಮದ ಕಜೆಕ್ಕಾಡು ನಿವಾಸಿಯಾಗಿದ್ದಾರೆ.
