ಕಡಬ: ಇಲ್ಲಿನ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ನ.20ರಂದು ಸಾರ್ವಜನಿಕರು ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು. ಈ ಮಧ್ಯೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಎಚ್.ಆರ್. ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದಾರೆ.
ಡಿಎಚ್ಒ ಭೇಟಿ ವೇಳೆ ಸಾಮಾಜಿಕ ಮುಂದಾಳುಗಳಾದ ಸೈಯದ್ ಮೀರಾ ಸಾಹೇಬ್, ರಾಯ್ ಅಬ್ರಹಾಂ, ಚಂದ್ರಶೇಖರ ಗೌಡ ಕೋಡಿಬೈಲು, ಸತೀಶ್ಚಂದ್ರ ರೈ ಬೀರುಕ್ಕು, ಕೆ.ಟಿ.ಫಿಲಿಪ್ ಬೆತ್ತೋಡಿ, ವಿವೇಕಾನಂದ ಬೊಳ್ಳಾಜೆ, ಸೈಯದ್ ಇಕ್ಬಾಲ್ ಅವರುಗಳು ಉಪಸ್ಥಿತರಿದ್ದರು.

ಸಮಸ್ಯೆ ಇಂದು-ನಿನ್ನೆಯದಲ್ಲ:
ಈ ಆಸ್ಪತ್ರೆಯ ಸಮಸ್ಯೆ ಇಂದು ನಿನ್ನೆಯದಲ್ಲ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದ ಆಸ್ಪತ್ರೆ ಹಲವು ವರ್ಷಗಳ ಹಿಂದೆ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದರೂ ಜನರಿಗೆ ಮಾತ್ರ ಪ್ರಯೋಜನವಾಗಿಲ್ಲ. ಖಾಯಂ ವೈದ್ಯರಿಲ್ಲದೆ ಈ ಆಸ್ಪತ್ರೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಈ ಸಮುದಾಯ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ ಸೀರೋಗ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು, ಹಿರಿಯ ವೈದ್ಯಾಽಕಾರಿ ಸೇರಿದಂತೆ ಇಲ್ಲಿಗೆ ಮಂಜೂರಾಗಿರುವ ತಜ್ಞವೈದ್ಯರ ನೇಮಕ ಇನ್ನೂ ಆಗಿಲ್ಲ, ಹಲವು ಸಮಯದಿಂದ ಹೊರರೋಗಿ ವಿಭಾಗದಲ್ಲಿ ಸೇವೆ ನೀಡುತ್ತಿದ್ದ ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಪಿಜಿ ವಿದ್ಯಾರ್ಥಿಗಳು ಕೂಡ ಈಗ ಬಾರದೇ ಇರುವುದರಿಂದ ರೋಗಿಗಳಿಗೆ ತೀವ್ರ ಸಮಸ್ಯೆಯಾಗಿದೆ ಈ ಬಗ್ಗೆ ಆರೋಗ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೂ ಮನವಿ ಸಲ್ಲಿಸಿದ್ದೇವೆ, ಆದರೂ ಸಮಸ್ಯೆ ಪರಿಹಾರವಾಗದೇ ಇರುವುದರಿಂದ ಈಗಾಗಲೇ ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿಭಟನೆಗೆ ಸಿದ್ದರಾಗಿದ್ದಾರೆ ಎಂದು ಸಯ್ಯದ್ ಮೀರಾ ಸಾಹೇಬ್ ಹೇಳಿದರು.
ರಾಯ್ ಅಬ್ರಹಾಂ ಅವರು ಮಾತನಾಡಿ, ನೀವು ಸರಕಾರಕ್ಕೆ ಪ್ರಪೋಸಲ್ ಕಳಿಸಿ ನಾವು ಫಾಲೋಅಪ್ ಮಾಡುತ್ತೇವೆ ಎಂದರು. ಬಳಿಕ ಮಾತನಾಡಿದ ಡಿಎಚ್ಒ ಅವರು ನಾವು ಸರಕಾರಕ್ಕೆ ಪ್ರಪೋಸಲ್ ಕಳಿಸ್ತಾ ಇದ್ದೇವೆ, ಎಲ್ಲಾ ಕಡೆ ಸಿಬ್ಬಂದಿ ಕೊರತೆ ಇದೆ, ಈಗಾಗಲೇ ಎಂ.ಬಿ.ಬಿ.ಎಸ್. ಆಗಿರುವವರಿಂದ ಅರ್ಜಿ ಆಹ್ವಾನಿಸಿದ್ದೇವೆ, ವೈದ್ಯರು ಅರ್ಜಿ ಸಲ್ಲಿಸದಿರುವುದರಿಂದ ಸಮಸ್ಯೆಯಾಗಿದೆ. ಎಕ್ಸ್ರೆ ಟೆಕ್ನಿಷಿಯನ್ ಸೇರಿದಂತೆ ಇತರ ಕೆಲವು ವಿಭಾಗಗಳಿಗೆ ಗುತ್ತಿಗೆಯಾಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಬಹುದು ಇದಕ್ಕೆ ಸರಕಾರ ಅನುಮತಿ ನೀಡಬೇಕು, ಅಲ್ಲದೆ ಖಾಸಗಿ ಮೆಡಿಕಲ್ ಕಾಲೇಜಿನ ಸಹಭಾಗಿತ್ವಕ್ಕಾಗಿ ಸುಳ್ಯದ ಕೆವಿಜಿ ಆಸ್ಪತ್ರೆಯ ಜತೆಗೆ ಮಾತುಕತೆ ನಡೆಯುತ್ತಿದೆ. ಅದೂ ಫಲಪ್ರದವಾಗದೆ ಇರುವುದರಿಂದ ಸಮಸ್ಯೆಗಳು ಹಾಗೆ ಉಳಿದಿದೆ, ಇನ್ನೊಂದು ವಾರದಲ್ಲಿ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಹೇಳಿ, ಉದ್ದೇಶಿತ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದರು.
ಭರವಸೆ ಈ ಮೊದಲು ಸಿಕ್ಕಿದೆ:
ಇದಕ್ಕೆ ಸೈಯದ್ ಮೀರಾ ಸಾಹೇಬ್ ಅವರು ಮಾತನಾಡಿ, ಇನ್ನೊಂದು ವಾರ ಅವಕಾಶ ಇದೆಯಲ್ಲ ಸಮಸ್ಯೆಯನ್ನು ಪರಿಹರಿಸಿ, ಪ್ರತಿಭಟನೆಯನ್ನು ನಾನು ಒಬ್ಬ ಹೇಳಿದರೆ ಕೈ ಬಿಡಲು ಸಾಧ್ಯವಿಲ್ಲ, ಮೊದಲು ನೀವು ಸಮಸ್ಯೆ ಪರಿಹರಿಸಿ, ಭರವಸೆ ನೀಡುವುದು ಇದಕ್ಕೂ ಮೊದಲು ಕೂಡ ಆಗಿದೆ, ಆದರೆ ಇಲ್ಲಿಯ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ ಎಂದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನರೇಟರ್ಗೆ ಇಂಧನ ಸಮಸ್ಯೆ, ಆಂಬುಲೆನ್ಸ್ ಸಮಸ್ಯೆಯ ಬಗ್ಗೆ ಆಸ್ಪತ್ರೆಯ ಪ್ರಭಾರ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಡಿಎಚ್ಒ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಭಾರ ವೈದ್ಯಾಽಕಾರಿ ಡಾ. ಮಂಜುನಾಥ್, ನಿವೃತ್ತ ವೈದ್ಯಾಽಕಾರಿ ಡಾ. ತ್ರಿಮೂರ್ತಿ ಅವರು ಉಪಸ್ಥಿತರಿದ್ದರು.