





ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿರುವ ಉದ್ಭವ ಲಿಂಗಕ್ಕೆ ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿದ್ದ ಪೂಜಾದಿ ಕಾರ್ಯಗಳನ್ನು ಮುಂದುವರೆಸಿಕೊಂಡು ಬರಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದ ಟೀಮ್ ಅಘೋರ ತಂಡದ ಸದಸ್ಯರು ಗುರುವಾರ ರಾತ್ರಿ ನದಿ ಗರ್ಭದಲ್ಲಿ ಮರಳಿನಿಂದಾವೃತವಾಗಿರುವ ಉದ್ಬವ ಲಿಂಗವನ್ನು ತೆರೆಯಲು ಕಾರ್ಯಾಚರಣೆ ನಡೆಸಿದರು.



ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾೖಕ್, ಸದಸ್ಯ ವೆಂಕಪ್ಪ ಪೂಜಾರಿ, ಈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಯುವಕರ ಶ್ರಮವನ್ನು ಶ್ಲಾಘಿಸಿದರು.





ಟೀಮ್ ಅಘೋರ ತಂಡದ ಗೌರವಾಧ್ಯಕ್ಷ ಸಂತೋಷ್ ಎನ್, ಅಧ್ಯಕ್ಷ ಬೃಜೇಶ್ ಎಮ್ ಎನ್ , ಕಾರ್ಯದರ್ಶಿ ಜಿತೇಶ್ ಶೆಟ್ಟಿ, ತಂಡದ ಮಾರ್ಗದರ್ಶಕರಾದ ಕುಕ್ಕಪ್ಪ ಗೌಡ , ಕೃಷ್ಣ ಶೆಣೈ ಗುರೂಜಿ, ಸದಸ್ಯರಾದ ಸುಧೀರ್ ಶೆಟ್ಟಿ, ರಶ್ಮಿತ್, ಸಂಪತ್, ಮುರಳಿ, ಕೌಶಿಕ್, ಕಾರ್ತಿಕ್, ಪ್ರಜ್ವಲ್, ಆಕಾಶ್, ಪವನ್ , ನಿಶ್ಚಿತ್, ಅವಿನಾಶ್, ಚಿಂತನ್ ,ಅಂಕಿತ್ , ಕಾರ್ತಿಕ್ ಗಾಣಿಗ, ಶ್ರೀನಿಧಿ ಉಪಾಧ್ಯಾಯ, ಟೀಮ್ ದಕ್ಷಿಣ ಕಾಶಿಯ ಪ್ರಸನ್ನ ಪೆರಿಯಡ್ಕ , ಕಿಶೋರ್ ನೀರಕಟ್ಟೆ, ಸಂದೀಪ್ ಮೊದಲಾದವರು ಭಾಗವಹಿಸಿದ್ದರು.










