ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಮತ್ತು ಜೀರ್ಣೋದ್ಧಾರದ ನಿಮಿತ್ತ ಇತ್ತೀಚೆಗಷ್ಟೆ ನಡೆದ ಭಕ್ತರ ಸಭೆಯಲ್ಲಿ ಕೇಳಿ ಬಂದ ಸಲಹೆಯಂತೆ ದೇವಳದ ಸಭಾಭವನ, ಅಯ್ಯಪ್ಪ ಗುಡಿ, ನಾಗನಗುಡಿ, ನವಗ್ರಹ ಗುಡಿ ತೆರವಿಗೆ ತಾಂಬೂಲ ಪ್ರಶ್ನೆಯು ನ.18ರಂದು ಬೆಳಿಗ್ಗೆ ಗಂಟೆ 10 ರಿಂದ ದೇವಳದ ಸಭಾಭವನದಲ್ಲೇ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ವಿನಂತಿಸಿದ್ದಾರೆ.
