ಬಡಗನ್ನೂರು : ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಜೆ.ಎಂ ಕೀರ್ತಿ ಪಂಜದಲ್ಲಿ ನಡೆದ ಜಿಲ್ಲಾ ಮಟ್ಟದ 17ರ ವಯೋಮಾನದ ಬಾಲಕಿಯರ ಎತ್ತರ ಜಿಗಿತದಲ್ಲಿ1.60 ಮೀಟರ್, ತ್ರಿವಿಧ ಜಿಗಿತದಲ್ಲಿ 11.34ಮೀ,ಹಾಗೂ ಹರ್ಡಲ್ಸ್ ನಲ್ಲಿ 15.2 ಸೆಕೆಂಡಿನಲ್ಲಿ ಗುರಿತಲುಪಿ ಕೂಟದಲ್ಲಿ ವಿಶೇಷ ದಾಖಲೆ ಮಾಡಿ ವೈಯಕ್ತಿಕ ಚಾಂಪಿಯನ್ ಪಡೆಯುವುದರೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ ಬಾರಿ ರಾಷ್ಟ್ರಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟ ಈಕೆ ಗುಮ್ಮಟಗದ್ದೆ ಮೋನಪ್ಪ ಗೌಡ ಮತ್ತು ಲಲಿತ ದಂಪತಿಗಳ ಪುತ್ರಿ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯ ಪ್ರೋತ್ಸಾಹದಲ್ಲಿ ಇವರಿಗೆ ದೖೆಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್ ಕಜೆ, ಬಾಲಚಂದ್ರ, ಹರಿಣಾಕ್ಷಿ ಹಾಗೂ ನಮಿತಾ ತರಬೇತಿ ನೀಡಿರುತ್ತಾರೆ
