ವಿಟ್ಲ: ಕೆಂಪು ಕಲ್ಲು ಸಾಗಾಟದ ಲಾರಿ ಪಲ್ಟಿಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕುಡ್ತಮುಗೇರು-ಸೆರ್ಕಳ ರಸ್ತೆಯ ಕಲ್ಲಮಜಲು ಎಂಬಲ್ಲಿ ನಡೆದಿದೆ.
ಕುಡ್ತಮುಗೇರು ಮೂಲಕ ಸೆರ್ಕಳ ಎಂಬಲ್ಲಿಗೆ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಈಚರ್ ಲಾರಿ ಕಲ್ಲಮಜಲು ಅಪಾಯಕಾರಿ ತಿರುವಿನಲ್ಲಿ ಮುಂಭಾಗದಿಂದ ಬರುತ್ತಿದ್ದ ಕಾರಿಗೆ ಸೈಡ್ ಕೊಡುವ ವೇಳೆ ಮೋರಿ ಕುಸಿದು ಕೆಳಭಾಗದ ತೋಟಕ್ಕೆ ಪಲ್ಟಿಯಾಗಿದೆ. ಲಾರಿಯೊಳಗಿದ್ದ ಕಾರ್ಮಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
