ಪುತ್ತೂರು: ನೀರು ಕೇವಲ ಜೀವದ್ರವ ಮಾತ್ರವಲ್ಲ. ಅದು ಸಕಲ ಜೀವರಾಶಿಯ ಉಸಿರಿನ ತ್ರಾಣ. ಮಾನವನಎಲ್ಲ ನಾಗರಿಕತೆಗಳು ಬೆಳೆದು ಬಂದುದು ಈ ಜಲ ಮೂಲಗಳ ಬಳಿ ಎಂಬುದನ್ನುಇತಿಹಾಸ ಸಾರಿ ಹೇಳುತ್ತಿದೆ.ನೀರುಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಜೀವನದಲ್ಲಿ ಅತ್ಯಂತ ಪ್ರಭಾವಿ ಸಂಪನ್ಮೂಲ.ಜೊತೆಗೆ ಕೃಷಿ, ವಾಣಿಜ್ಯ, ಗಡಿರಕ್ಷಣೆ, ಸರಕು ಸಾಗಾಣಿಕೆಯ ಸಾಧನವೂ ಆಗಿದೆ.ನಮ್ಮ ಭವಿಷ್ಯದ ಪೀಳಿಗೆಗೆ, ನೀರಿನ ಭವಿಷ್ಯವನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳು ಜಲ ಸಂರಕ್ಷಣೆಗೆ ತಮ್ಮದೇ ವಿಶಿಷ್ಠ ಕಾರ್ಯ ಯೋಜನೆಗಳನ್ನು ಹಾಕಿಕೊಂಡು ಕ್ರಿಯಾಶೀಲವಾಗಿದೆ.
ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿದ್ದ ಬಾವಿಯನ್ನು ಶುಚಿಗೊಳಿಸಿ ಸಮೃದ್ಧಿಗೊಳಿಸಿ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಬಳಸಿಕೊಳ್ಳುವ ಹಾಗೆ ಜೀವತುಂಬುವಂತೆ ಮಾಡಿದ ಈ ಯೋಜನೆ ಮಾದರಿಯಾಗಿದೆ.ಮಳೆಯ ನೀರು ಹರಿದು ಹೋಗದಂತೆತಡೆ ಹಿಡಿದು ಭೂಮಿಗೆಇಂಗುವಂತೆ ನಿಯಂತ್ರಿಸುವ ಗಿಡಗಳನ್ನು ಈ ಬಾವಿಯ ಸುತ್ತ ಬೆಳೆಸಿ ಪೋಷಿಸುವ ಮೂಲಕ ಜಲ ಸಂರಕ್ಷಣೆಯ ಪ್ರಯತ್ನವನ್ನು ಕಾರ್ಯಗತಗೊಳಿಸಲಾಗಿದೆ.
ಇದಕ್ಕೆ ಪೂರಕವಾಗಿ ಪುತ್ತೂರಿನ ಆಸುಪಾಸಿನ ಸುಮಾರು 50ಕ್ಕೂ ಹೆಚ್ಚು ದೇವಸ್ಥಾನಗಳಿಂದ ಪವಿತ್ರ ಗಂಗಾಜಲವನ್ನು ತಂದು ಈ ಬಾವಿಗೆ ಅರ್ಪಿಸುವ ಕಾರ‍್ಯ ನಡೆಯಿತು.ಅಂತಹ ನೀರಿನ ಸೇವನೆಯಿಂದಶಾರೀರಿಕ ಮತ್ತು ಮಾನಸಿಕ ಶುದ್ಧಿ ನಡೆಯುತ್ತದೆ.ಆಧ್ಯಾತ್ಮಿಕ ಬೆಳವಣಿಗೆಗೆ ಶಕ್ತಿ ಕೊಡುತ್ತದೆ.
ನ.12ರಂದು ತೆಂಕಿಲದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ (ಬಿ.ಎಡ್) ಸಂಸ್ಥೆ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಿಂದ ಪವಿತ್ರ ಗಂಗಾಜಲವನ್ನು ತಂದು ಅರ್ಪಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಮೋಹನ್ ಭಟ್ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ತ್ರಿವೇಣಿ ಪೆರ್‌ರ್ವೋಡಿ,ಪ್ರಾಂಶುಪಾಲೆ ಶೋಭಿತಾ ಸತೀಶ್, ಶಿಕ್ಷಕರಾದ ಅಕ್ಷತಾ ಯಂ, ಗ್ರಾಮಸ್ಥರಾದ ಮೂಲಚಂದ್ರ ಮತ್ತು ಗೋವಿಂದ ಬೋರ್ಕರ್, ಅಶ್ವಿನಿ ಉಪಸ್ಥಿತರಿದ್ದರು.
