ಪುತ್ತೂರು: ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆ ಪಾಳ್ಯತ್ತಡ್ಕಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಬಗ್ಗೆ ಶಾಲಾ ಮುಖ್ಯ ಗುರುಗಳಾದ ಎನ್ ನರೇಂದ್ರ ಭಟ್ ತಿಳಿಸಿಕೊಟ್ಟರು. ನಂತರ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಪಾಯಸವನ್ನು ವಿತರಿಸಲಾಯಿತು. ಮಕ್ಕಳು ತಾವೇ ತಯಾರಿಸಿದ ಗಾಳಿಪಟವನ್ನು ಹಾರಿಸಿ ಸಂಭ್ರಮ ಪಟ್ಟರು. ಕೊನೆಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಾಪಕ ವೃಂದದವರು ಹಾಜರಿದ್ದರು.
