*ಸ್ವಾಭಿಮಾನ,ಸ್ವಾವಲಂಬಿ ಸಮಾಜವಾಗಿ ಗೌಡ ಸಮುದಾಯ ಬೆಳೆಯಬೇಕು -ಸಂಜೀವ ಮಠ೦ದೂರು
*ಟ್ರಸ್ಟ್ ನ ಸಂಘಟನಾ ಕಾರ್ಯ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘಕ್ಕೆ ಸ್ಪೂರ್ತಿಯಾಗಿದೆ- ಚಿದಾನಂದ ಬೈಲಾಡಿ
*ವಾರ್ಷಿಕ ಕಾರ್ಯಕ್ರಮ, ವಿದ್ಯಾನಿಧಿ ಯೋಜನೆಗೆ ಒಕ್ಕೂಟ ಪದಾಧಿಕಾರಿಗಳ ಸಹಕಾರ ಅಗತ್ಯ- ರವಿ ಮುಂಗ್ಲಿಮನೆ
*ಒಕ್ಕಲಿಗ ಸ್ವ ಸಹಾಯ ಸಂಘ, ಒಕ್ಕೂಟಗಳು ಜಿಲ್ಲಾ,ರಾಜ್ಯ ಮಟ್ಟಕ್ಕೆ ಬೆಳೆಯಲಿ -ವಾರಿಜಾ ಬೆಳಿಯಪ್ಪ ಗೌಡ
*ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನು ಸಮಾಜದಲ್ಲಿ ಉನ್ನತ ನಾಯಕರಾಗಿ ಮೂಡಿಬರಬೇಕು-ಎ ವಿ ನಾರಾಯಣ
*ಸಮುದಾಯದ ಕಟ್ಟ ಕಡೆಯ ವ್ಯಕ್ತಿಯನ್ನು ಟ್ರಸ್ಟ್ ನ ಮೂಲಕ ತಲುಪಿ ಆರ್ಥಿಕವಾಗಿ, ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸುವ ಪ್ರಾಮಾಣಿಕ ಪ್ರಯತ್ನ- ಡಿವಿ ಮನೋಹರ್
*ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ನೂತನ ಸಭಾಭವನದ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ – ಗೋಪಾಲಕೃಷ್ಣ ಪಟೇಲ್ ಚಾರ್ವಾಕ
ಪುತ್ತೂರು:ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಯಶಸ್ವಿ 10 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸವಿನೆನಪಿಗಾಗಿ ಜ 4 ರಂದು ಲೋಕಾರ್ಪಣೆಗೊಂಡ ಸಭಾಭವನಕ್ಕೆ ರೂ 10000/- ಮೇಲ್ಪಟ್ಟು ದೇಣಿಗೆ ನೀಡಿದವರ ವಿವರದ ಅಮೃತಶಿಲೆಯ ನಾಮಫಲಕಗಳ ಉದ್ಘಾಟನಾ ಕಾರ್ಯಕ್ರಮ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ನೆಲ್ಲಿಕಟ್ಟೆಯಲ್ಲಿರುವ ನೂತನ ಸಭಾ ಭವನದಲ್ಲಿ ನ 14 ರಂದು ನಡೆಯಿತು.

ಸ್ವಾಭಿಮಾನ,ಸ್ವಾವಲಂಬಿ ಸಮಾಜವಾಗಿ ಗೌಡ ಸಮುದಾಯ ಬೆಳೆಯಬೇಕು -ಸಂಜೀವ ಮಠಂದೂರು
ಅಮೃತಶಿಲೆಯ ನಾಮಫಲಕ ಉದ್ಘಾಟನೆ ಮಾಡಿ ಮಾತನಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು,ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಸಂಜೀವ ಮಠಂದೂರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪ್ರತಿ ಹಳ್ಳಿ ,ಗ್ರಾಮ ಗ್ರಾಮಕ್ಕೂ ತಲುಪಿ ಸ್ವ ಸಹಾಯ ಸಂಘಗಳನ್ನು ರಚಿಸಿಕೊಂಡು ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ಸಂಘಗಳಿಗೆ ಸೇರ್ಪಡೆ ಮಾಡಿಕೊಂಡು ಉಳಿತಾಯ,ಆರ್ಥಿಕ ವ್ಯವಹಾರ ಮಾಡಿಕೊಂಡು ಸಂಘಟನಾ ಕಾರ್ಯ ಮೆಚ್ಚುವಂಥದ್ದು, ಒಕ್ಕೂಟಗಳ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ,ಸಮುದಾಯದ ಎಲ್ಲಾ ಕಾರ್ಯಕ್ರಮದಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಂಡು ಗೌಡ ಸಮುದಾಯ ಸ್ವಾಭಿಮಾನ,ಸ್ವಾವಲಂಬಿ ಸಮಾಜವಾಗಿ ಬೆಳೆಯಬೇಕು ಎಂದರು.
ಟ್ರಸ್ಟ್ ನ ಸಂಘಟನಾ ಕಾರ್ಯ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘಕ್ಕೆ ಸ್ಫೂರ್ತಿಯಾಗಿದೆ -ಚಿದಾನಂದ ಬೈಲಾಡಿ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಮಾತನಾಡಿ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಮೂಲಕ ಒಕ್ಕಲಿಗ ಸಮುದಾಯದ ಸಂಘಟನೆ ಅತ್ಯುತ್ತಮ ಮಟ್ಟದಲ್ಲಿ ನಡೆಯುತ್ತಿದ್ದು ಟ್ರಸ್ಟ್ ನ ಸಂಘಟನಾ ಕಾರ್ಯ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘಕ್ಕೆ ಸ್ಪೂರ್ತಿಯಾಗಿದೆ,ಸಂಘಟನೆಗಳು ಸೌಹಾರ್ದತೆಗೆ ಹೊರತು ಸಂಘರ್ಷಕಲ್ಲ ಎಂದರು.
ವಾರ್ಷಿಕ ಕಾರ್ಯಕ್ರಮ,ವಿದ್ಯಾನಿಧಿ ಯೋಜನೆಗೆ ಒಕ್ಕೂಟ ಪದಾಧಿಕಾರಿಗಳ ಸಹಕಾರ ಅಗತ್ಯ-ರವಿ ಮುಂಗ್ಲಿಮನೆ
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ರವಿ ಮುಂಗ್ಲಿಮನೆ ಮಾತನಾಡಿ ಮುಂದಿನ ತಿಂಗಳು ನಡೆಯುವ ವಾರ್ಷಿಕ ಸಮಾವೇಶ,ಸಾಮೂಹಿಕ ಸತ್ಯನಾರಾಯಣ ಪೂಜೆ,ಹಾಗೂ ಉದ್ದೇಶಿತ ವಿದ್ಯಾದತ್ತಿ ನಿಧಿ ಯೋಜನೆಗೆ ಎಲ್ಲಾ ಒಕ್ಕೂಟ ಅಧ್ಯಕ್ಷ ,ಪದಾಧಿಕಾರಿಗಳ, ಸದಸ್ಯರ ಸಹಕಾರ ಅಗತ್ಯ ಎಂದರು.
ಒಕ್ಕಲಿಗ ಸ್ವ ಸಹಾಯ ಸಂಘ, ಒಕ್ಕೂಟಗಳು ಜಿಲ್ಲಾ ,ರಾಜ್ಯ ಮಟ್ಟಕ್ಕೆ ಬೆಳೆಯಲಿ -ವರಿಜಾ ಬೆಳಿಯಪ್ಪ ಗೌಡ
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ವಾರಿಜಾ ಬೆಳಿಯಪ್ಪ ಗೌಡ ಮಾತನಾಡಿ ಟ್ರಸ್ಟ್ ನ ಮೂಲಕ ಸ್ವ ಸಹಾಯ ಸಂಘಗಳು ಹಲವು ತಾಲೂಕಿನಲ್ಲಿ ಕಾರ್ಯಾಚರಿಸುತ್ತಿದ್ದು ,ಉತ್ತಮ ಸಂಘಟನೆ, ವ್ಯವಹಾರ ನಡೆಸುತ್ತಿದ್ದು ಸ್ವ ಸಹಾಯ ಸಂಘಗಳು ಜಿಲ್ಲಾ ,ರಾಜ್ಯ ಮಟ್ಟದಲ್ಲಿ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ಮೂಡಿಬರಬೇಕು- ಎ ವಿ ನಾರಾಯಣ
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಎ ವಿ ನಾರಾಯಣ ಮಾತನಾಡಿ ತಮ್ಮ ಮಕ್ಕಳನ್ನು ಉತ್ತಮ ವಿದ್ಯಾಬ್ಯಾಸ ನೀಡಿ ಸಮಾಜದಲ್ಲಿ ಉನ್ನತ ನಾಯಕನಾಗಿ ಮೂಡಿಬರಬೇಕು, ಸಂಪಾದನೆಯ ಒಂದು ಭಾಗ ಸಮಾಜಕ್ಕೆ ಸಮರ್ಪಿಸಬೇಕು ಆಗ ಮಾತ್ರ ಸಮಾಜದಲ್ಲಿ ಉನ್ನತ ನಾಯಕನಾಗಿ ಮೂಡಿ ಬರಲು ಸಾಧ್ಯ ಎಂದರು.
ಸಮುದಾಯದ ಕಟ್ಟ ಕಡೆಯ ವ್ಯಕ್ತಿಯನ್ನು ಟ್ರಸ್ಟ್ ನ ಮೂಲಕ ತಲುಪಿ ಆರ್ಥಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸುವ ಪ್ರಾಮಾಣಿಕ ಪ್ರಯತ್ನ- ಡಿ ವಿ ಮನೋಹರ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿ ವಿ ಮನೋಹರ್ ಮಾತನಾಡಿ ಸುಮಾರು 11 ವರ್ಷಗಳ ಹಿಂದೆ ಎ ವಿ ನಾರಾಯಣರವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಟ್ರಸ್ಟ್ ಯಶಸ್ವಿ 10 ವರ್ಷಗಳನ್ನು ಪೂರೈಸಿ ,ಕಳೆದ ಜನವರಿಯಲ್ಲಿ ಅತ್ಯಂತ ಸಂಭ್ರಮದಲ್ಲಿ ದಶಮಾನೋತ್ಸವನ್ನು ಆಚರಿಸಿದ್ದು ಸಂತೋಷದ ವಿಚಾರ,ಇದರ ಸವಿ ನೆನಪಿಗಾಗಿ ಲೋಕಾರ್ಪಣೆಗೊಂಡ ಸಂಘಕ್ಕೆ ದೇಣಿಗೆ ನೀಡಿದವರ ವಿವರದ ಅಮೃತ ಶಿಲೆ ನಾಮಫಲಕ ಅನಾವರಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದು,ದಶಮಾನೋತ್ಸವ ಕಾರ್ಯಕ್ರಮ,ಮಾದರಿ ದಂಪತಿ ಸನ್ಮಾನ ಕಾರ್ಯಕ್ರಮ,ನೂತನ ಸಭಾಭವನ ನಿರ್ಮಾಣಕ್ಕೆ ಸಹಕರಿಸದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ,ಟ್ರಸ್ಟ್ ಮೂಲಕ ಹಲವು ತಾಲೂಕಿನಲ್ಲಿ ಸ್ವ ಸಹಾಯ ಸಂಘಗಳನ್ನು ರಚಿಸಿಕೊಂಡು ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿ ಆರ್ಥಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸುವ ಪ್ರಯತ್ನ ಟ್ರಸ್ಟ್ ನ ವತಿಯಿಂದ ಪ್ರಾಮಾಣಿಕವಾಗಿ ನಡೆಯುತಿದೆ ಎಂದರು.
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ನೂತನ ಸಭಾಭವನಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ – ಗೋಪಾಲಕೃಷ್ಣ ಪಟೇಲ್ ಚಾರ್ವಾಕ
ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದ ,ಪ್ರಸ್ತುತ ಪುತ್ತೂರು ಒಕ್ಕಲಿಗ ಸ್ವ ಸಹಾಯ ಒಕ್ಕೂಟಗಳ ಕೇಂದ್ರ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಪ್ರಾಸ್ತಾವಿಕ ಸ್ವಾಗತದೊಂದಿಗೆ ಮಾತನಾಡಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸವಿನೆನಪಿಗಾಗಿ ಜ 4 ರಂದು ಲೋಕಾರ್ಪಣೆಗೊಂಡ ನೂತನ ಸಭಾಭವನಕ್ಕೆ ದೇಣಿಗೆ ನೀಡಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು,ಹಾಗೂ ಸಭಾಭವನ ನಿರ್ಮಾಣದ ಆಯವ್ಯಯ ಲೆಕ್ಕಾಚಾರಗಳನ್ನು ತಿಳಿಸಿದರು.ಹಾಗೂ ಸ್ವ ಸಹಾಯ ಒಕ್ಕೂಟಗಳು ಸಮಾಜದ ಅಭ್ಯುದಯದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ವಿವರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ಅಮರನಾಥ ಗೌಡ ಬಪ್ಪಳಿಗೆ,ವಿವಾಹ ವೇದಿಕೆಯ ಸಂಚಾಲಕರಾದ ಸುರೇಶ್ ಕಲ್ಲಾರೆ , ಉಪಸ್ಥಿತರಿದ್ದರು.
ಕಾರ್ಯಕ್ರಮದ ಅತಿಥಿಗಳನ್ನು ಪುತ್ತೂರು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ವಲಯ ಅಧ್ಯಕ್ಷರುಗಳಾದ ಲೋಕೇಶ್ ಚಾಕೋಟೆ, ನಾರಾಯಣ ಗೌಡ ಓಟೆ ,ಲೋಕನಾಥ ಗೌಡ ಕಾಡಮನೆ, ದಿವ್ಯೇಶ್ ,ಗಂಗಯ್ಯ ಗೌಡ ಕನ್ನಡಾರು,ಅನಿತಾ ಲಕ್ಷ್ಮಣ ಗೌಡ ,ಸದಾನಂದ ಕುಂಟ್ಯಾನ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಂ ಶಾಲು ಹಾಕಿ ಹೂಗುಚ್ಛ ನೀಡಿ ಗೌರವಿಸಿದರು,ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನಿಯೋಜಿತ ಅಧ್ಯಕ್ಷರಾದ ಸುಂದರ ಗೌಡ ನಡುಬೈಲು ಇವರನ್ನು ಶಾಲು ಹಾಕಿ ಹೂಗುಚ್ಛ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸಿಬ್ಬಂದಿ ವರ್ಗದವರು ಪ್ರಾರ್ಥಿಸಿದರು.,ಟ್ರಸ್ಟ್ ನ ಸಿಬ್ಬಂದಿ ಶೃತಿ ಬಲ್ನಾಡು ಚಿಂತನ ವಾಚಿಸಿದರು,ಟ್ರಸ್ಟ್ ನ ಮೇಲ್ವಿಚಾರಕರಾದ ವಿಜಯಕುಮಾರ್ ವಂದಿಸಿದರು, ಮೇಲ್ವಿಚಾರಕರಾದ ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು.
ಸ್ವ ಸಹಾಯ ಸಂಘದ ಒಕ್ಕೂಟಗಳ ಕೇಂದ್ರ ಸಮಿತಿ ಸಭೆ
ಕಾರ್ಯಕ್ರಮದ ಬಳಿಕ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ ಸಭೆ ಕೇಂದ್ರ ಸಮಿತಿ ಅಧ್ಯಕ್ಷರಾಗಿರುವ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ನಿರ್ಣಯಿಸಲಾಯಿತು.ಸಭೆಯಲ್ಲಿ ಟ್ರಸ್ಟ್ ನ ಅಧ್ಯಕ್ಷರು,ಸ್ಥಾಪಕ ಅಧ್ಯಕ್ಷರು,ಒಕ್ಕೂಟಗಳ ವಲಯ ಅಧ್ಯಕ್ಷರುಗಳು,ಗ್ರಾಮ ಒಕ್ಕೂಟ ಅಧ್ಯಕ್ಷರು,ಪದಾಧಿಕಾರಿಗಳು ಉಪಸ್ಥಿತರಿದ್ದರು,ಸಭೆಯ ಅಧ್ಯಕ್ಷರು ಸ್ವಾಗತಿಸಿ,ಟ್ರಸ್ಟ್ ನ ಮೆನೇಜರ್ ಸುನಿಲ್ ವಂದಿಸಿದರು.