ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದಿಂದ ತೆನ್ಕಾಯಿಮಲೆ ತಂಡಕ್ಕೆ ಗೌರವ ಸನ್ಮಾನ
ಪುತ್ತೂರು: ಇನ್ಸ್ಪೈರ್ ಫಿಲಂಸ್ ತಂಡದ ರವಿಚಂದ್ರ ರೈ ಬಿ ಮುಂಡೂರು ನಿರ್ದೇಶನದ ಈಗಾಗಲೇ ಪುತ್ತೂರು ಮತ್ತು ಮಂಗಳೂರಿನ ಪ್ರೀಮಿಯರ್ ಶೋಗಳಲ್ಲಿ ಜನರ ಮನ ಗೆದ್ದು ಇತಿಹಾಸ ನಿರ್ಮಿಸಿರುವ ತೆನ್ಕಾಯಿಮಲೆ ಚಿತ್ರದ ಪ್ರೀಮಿಯರ್ ಶೋ ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ನ.12ರಂದು ಪ್ರದರ್ಶನಗೊಂಡಿತು.

ಈ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಶೆಟ್ಟಿ ಮತ್ತು ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಶೆಟ್ಟಿ, ಕೊಲ್ಲಾಪುರದಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷರಾದ ರಂಗನಾಥ,ಜ್ಞಾನ ಗಂಗಾ ವಿದ್ಯಾ ಸಂಸ್ಥೆ ಅಧ್ಯಕ್ಷ ದಿನೇಶ್ ಹಾಗೂ ಮಾನಸ ವಿದ್ಯಾಲಯ ಮುಖೋಪಾಧ್ಯಯರಾದ ರಾಘವೇಂದ್ರ ನೆರವೇರಿಸಿದರು. ಚಿತ್ರದ ನಿರ್ದೇಶಕ ರವಿಚಂದ್ರ ರೈ ಮುಂಡೂರು ರವರಿಗೆ ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಮುಖ್ಯ ರೂವಾರಿ ಸದಾನಂದ ಶೆಟ್ಟಿ, ಮಮತಾ ಸದಾನಂದ ಶೆಟ್ಟಿ ,ಅನುಷ ಶೆಟ್ಟಿ ,ಅನುಶ್ರೀ ಶೆಟ್ಟಿ ,ಪ್ರಭಾಕರ್ ಶೆಟ್ಟಿ ಶಿವಾನಂದ ಶೆಟ್ಟಿ,ತೆನ್ಕಾಯಿ ಮಲೆ ಚಿತ್ರ ತಂಡದ ಸದಸ್ಯರು ಚಿತ್ರದ ಸಹಾಯಕ ನಿರ್ದೇಶಕರಾದ ಪ್ರವೀಣ್ ಕುಮಾರ್ ಮುಲಾರ್ , ಅಶ್ವಥ್ ಎನ್ ಪುತ್ತೂರು ಹಾಗೂ ಅನುಪ್ತ ರವಿಚಂದ್ರ ರೈ , ಕಾರ್ತಿಕ್ ರೈ ಹಾಗೂ ರಂಜಿತ್ ಶೆಟ್ಟಿ. ಸಿನಿಪ್ರೀಯರು ಉಪಸ್ಥಿತರಿದ್ದರು. ತೆನ್ಕಾಯಿಮಲೆ ಚಿತ್ರವು ಇಂಡಸ್ಟ್ರಿಯಲ್ಲಿ ಹೊಸಬರಿಗೆ ಹೊಸತನಕ್ಕೆ ಹೊಸದಾರಿಯನ್ನು ಮಾಡಿಕೊಟ್ಟಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.