





ಸಕಾರಾತ್ಮಕ ಚಿಂತನೆಯಿದ್ದಾಗ ಮಧುಮೇಹವನ್ನು ಗೆಲ್ಲಬಹುದು-ಡಾ.ನಝೀರ್ ಅಹಮದ್


ಪುತ್ತೂರು: ವಿಶ್ವ ಮಧುಮೇಹ ದಿನದ ಪ್ರಯುಕ್ತ ಕಲ್ಲಾರೆ ಕೃಷ್ಣಾ ಆರ್ಕೇಡ್ ನಲ್ಲಿನ ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್ ನಲ್ಲಿ ಉಚಿತ ಥೈರಾಯ್ಡ್, HBA1C, ಶುಗರ್, ಕೊಲೆಸ್ಟ್ರಾಲ್, ಮೂಳೆ ಸಾಂದ್ರತೆ(ಬಿಎಂಡಿ) ಬಗ್ಗೆ ಮಾಹಿತಿ ಹಾಗೂ ತಪಾಸಣಾ ಶಿಬಿರವು ನ.14 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.





ಸಕಾರಾತ್ಮಕ ಚಿಂತನೆಯಿದ್ದಾಗ ಮಧುಮೇಹವನ್ನು ಗೆಲ್ಲಬಹುದು-ಡಾ.ನಝೀರ್ ಅಹಮದ್:
ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್ ನ ವೈದ್ಯಕೀಯ ಹಾಗೂ ಮಧುಮೇಹ ತಜ್ಞರಾದ ಡಾ.ನಝೀರ್ ಅಹಮದ್ ರವರು ಮಾತನಾಡಿ, ಮಧುಮೇಹ(ಶುಗರ್) ಅನ್ನುವುದು ದೊಡ್ಡ ಕಾಯಿಲೆಯಲ್ಲ. ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅದು ನಿಂತಿದೆ. ನಮ್ಮಲ್ಲಿ ಸಕಾರಾತ್ಮಕ ಚಿಂತನೆಯನ್ನು ಇದ್ದಾಗ ಮಧುಮೇಹವನ್ನು ಗೆಲ್ಲಬಹುದು ಮಾತ್ರವಲ್ಲ ಮಧುಮೇಹ ಇಲ್ಲದವರ ಜೀವನದಂತೆ ಜೀವನವನ್ನು ಮಾಡಬಹುದಾಗಿದೆ. ಮಧುಮೇಹ ನಿಯಂತ್ರಣವಾಗಿಟ್ಟುಕೊಳ್ಳುವಲ್ಲಿ ಶೇ.1ರ ಪ್ರಮಾಣ ವೈದ್ಯರದ್ದು ಆದರೆ ಶೇ.99ರ ಪ್ರಮಾಣ ಮಧುಮೇಹಿ ವ್ಯಕ್ತಿಯದ್ದು ಎಂದ ಅವರು ಬೆಳಿಗ್ಗೆ ಎದ್ದು ವ್ಯಾಯಾಮ ಮಾಡಿ ಬಳಿಕ ಸಿಕ್ಕ ಸಿಕ್ಕ ಜಂಕ್ ಫುಡ್ ಗಳನ್ನು ಸೇವಿಸಿದರೆ ಆಗದು. ಕೇವಲ ಪುಸ್ತಕ, ಯೂಟ್ಯೂಬ್ ನೋಡಿ ಈಜು ಕಲಿಯಲಾಗದು, ಈಜು ಕಲಿಯಬೇಕಾದರೆ ನೀರಿಗೆ ಇಳಿಯಲೇಬೇಕು ಹಾಗೆಯೇ ಮಧುಮೇಹ ಜಯಿಸಬೇಕಾದರೆ ವೈದ್ಯರು ನೀಡಿದ ಸಲಹೆಯನ್ನು ಪಾಲಿಸುವ ಮೂಲಕ ತಮ್ಮ ಆಹಾರಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಡಾ.ನಝೀರ್ ರವರ ಪಾತ್ರ ಬಹಳಷ್ಟಿದೆ-ಪ್ರೊ|ದತ್ತಾತ್ರೇಯ ರಾವ್:
ರೋಟರಿ ಕ್ಲಬ್ ಪುತ್ತೂರು ನಿಯೋಜಿತ ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಸ್ವಾಗತಿಸಿ, ಮಾತನಾಡಿ, ರೋಟರಿ ಪುತ್ತೂರು ಸದಸ್ಯರಾಗಿರುವ ಡಾ.ನಝೀರ್ ಅಹಮದ್ ರವರು ವರ್ಷಪೂರ್ತಿ ಸಾರ್ವಜನಿಕರ ಆರೋಗ್ಯದ ಸಂಬಂಧಿತ ಉಚಿತ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದು ಅವರಿಗೆ ಸಮಾಜದಲ್ಲಿನ ಜನರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ತಿಳಿಯುತ್ತದೆ. ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಡಾ.ನಝೀರ್ ರವರ ಪಾತ್ರ ಬಹಳಷ್ಟಿದೆ ಮಾತ್ರವಲ್ಲ ಡಾ.ನಝೀರ್ ರವರು ನಿರ್ವಹಿಸುವ ಈ ಕಾರ್ಯ ರೋಟರಿ ಕ್ಲಬ್ ಗೆ ಇಮೇಜ್ ಅನ್ನು ಇಮ್ಮಡಿಗೊಳಿಸಿದೆ. ಆರೋಗ್ಯವಂತ ಸಮಾಜ ನಿರ್ಮಿಸುವ ಇಂತಹ ಕಾರ್ಯಕ್ರಮಗಳು ಡಾ.ನಝೀರ್ ರವರು ನಿರಂತರ ಮಾಡುವಂತಾಗಲಿ, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂದರು.

ಶಿಬಿರಕ್ಕೆ ಆಗಮಿಸುವ ಫಲಾನುಭವಿಗಳಿಗೆ ಲಘು ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ರೋಟರಿ ಕ್ಲಬ್ ಪುತ್ತೂರು ಸದಸ್ಯ ಹೆರಾಲ್ಡ್ ಮಾಡ್ತಾ ವಂದಿಸಿದರು. ರೋಟರಿ ಪುತ್ತೂರು ಸದಸ್ಯ ವಿಶ್ವನಾಥ ಗೌಡ, ರೋಟರ್ಯಾಕ್ಟ್ ಪುತ್ತೂರು ಇದರ ಅಧ್ಯಕ್ಷ ವಿನೀತ್ ಹಾಗೂ ಹರ್ಷಿತ್ ಉಪಸ್ಥಿತರಿದ್ದರು. ಮೆಕ್ಲಾಯಿಡ್ ಕಂಪೆನಿಯ ಚೇತನ್ ಹಾಗೂ ವರುಣ್, ಟೊರೆಂಟ್ ಕಂಪನಿಯ ಚೇತನ್ ಶೆಟ್ಟಿ, ಇಂಟಾಸ್ ಕಂಪನಿಯ ಶ್ರೀಜನ್, ಸನ್ ಫಾರ್ಮಾ ಕಂಪೆನಿಯ ಮನ್ಸೂರ್, ಹೋರ್ಲಿಕ್ಸ್ ಡಯಾಬೆಟ್ಸ್ ಕಂಪನಿಯ ಅಮೀರ್ ಸೊಹೈಲ್, ಮ್ಯಾನ್ ಕೈಂಡ್ ಫಾರ್ಮಾದ ಅಶೋಕ್ ಮತ್ತು ರಕ್ಷಿತ್, ಮೈಕ್ರೋಲ್ಯಾಬ್ಸ್ ಕಂಪೆನಿಯ ಶರತ್, ಅಗಿಲಾಸ್ ಲ್ಯಾಬ್, ಥೈರೋಕೇರ್ ಮತ್ತು ಡಾ.ನಝೀರ್ಸ್ ಅಹಮದ್ ಕ್ಲಿನಿಕ್ ಸಿಬ್ಬಂದಿಗಳು ಸಹಕರಿಸಿದರು.
ವಿಶೇಷ ರಿಯಾಯಿತಿ ದರದಲ್ಲಿ ಲಭ್ಯ…
ಗ್ಲುಕೊಮೀಟರ್, ಡಿಜಿಟಲ್ ಬಿಪಿ ಮೆಷಿನ್ ಗಳು ಹಾಗೂ ಸತತವಾಗಿ 14 ದಿನಗಳ ರಕ್ತದ ಸಕ್ಕರೆಯ ಏರಿಳಿತವನ್ನು ಅಳೆಯುವ ವಿನೂತನ ತಂತ್ರಜ್ಞಾನದ ಸಾಧನ(Freestyle Libre CGMS system) ಇದರ ಬಳಕೆ, ಅದರ ಉಪಯೋಗದ ಬಗ್ಗೆ ಡಾ.ನಝೀರ್ ಅಹಮದ್ ರವರು ಫಲಾನುಭವಿಗಳಿಗೆ ತಿಳಿಸಿರುತ್ತಾರೆ. ಗ್ಲುಕೊಮೀಟರ್, ಡಿಜಿಟಲ್ ಬಿಪಿ ಮೆಷಿನ್ ಗಳು ಹಾಗೂ ಸತತವಾಗಿ 14 ದಿನಗಳ ರಕ್ತದ ಸಕ್ಕರೆಯ ಏರಿಳಿತವನ್ನು ಅಳೆಯುವ ವಿನೂತನ ತಂತ್ರಜ್ಞಾನದ ಸಾಧನಗಳನ್ನು ನವೆಂಬರ್ ತಿಂಗಳು ಪೂರ್ತಿ ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಆಸಕ್ತ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಡಾ.ನಝೀರ್ ಡಯಾಬಿಟಿಸ್ ಸೆಂಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಗವಹಿಸಿದ ಫಲಾನುಭವಿಗಳು..
*ಬಿಎಂಡಿ-41 ಮಂದಿ
*ಕೊಲೆಸ್ಟ್ರಾಲ್-50 ಮಂದಿ
*ಥೈರಾಯ್ಡ್-47 ಮಂದಿ
*ಮಧುಮೇಹ-40 ಮಂದಿ
*HBA1C-30 ಮಂದಿ










