‘ಅಧಿಕಾರಿಗಳು ಕೆಲಸ ಮಾಡದಿದ್ರೆ ಯಾರು ಮಾಡೋದು’

0

ರಸ್ತೆ ಗುಂಡಿ ಮುಚ್ಚಿಸದ ವಿಚಾರ;ಶಾಸಕರು ನಗರಸಭಾ ಕಮಿಷನರ್ ರನ್ನು ತರಾಟೆಗೆತ್ತಿಕೊಂಡ ಫೋನ್ ಕರೆ ಆಡಿಯೋ ವೈರಲ್

ಪುತ್ತೂರು: ಭಾನುವಾರ ಶಾಸಕ ಅಶೋಕ್ ರೈ ಅವರು ಪುತ್ತೂರು ನಗರಸಭಾ ಕಮಿಷನರ್ ಗೆ ಫೋನ್ ಕರೆ ಮಾಡಿ ಪುತ್ತೂರು ನಗರದ ರಸ್ತೆಯ ಹೊಂಡ ಮುಚ್ಚದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕರು ಕಮಿಷನರ್ ಜೊತೆ ಮಾಡಿದ ವಿಡಿಯೊ ವೈರಲ್ ಆಗಿತ್ತು. ರಾಜ್ಯಮಟ್ಟದಲ್ಲೂ ಸುದ್ದಿಯಾಗಿತ್ತು. ಶಾಸಕರು ಕಮಿಷನರ್ ರನ್ನು ಯಾಕೆ ತರಾಠೆಗೆ ಎತ್ತಿಕೊಂಡದಿದ್ದಾರೆ? ರಸ್ತೆ ಹೊಂಡಮುಚ್ಚದ ಕಾರಣಕ್ಕೆ ಆ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾದರೂ ಯಾಕೆ ಎಂಬುದರ ಬಗ್ಗೆ ಹಲವರಿಗೆ ಗೊತ್ತಿಲ್ಲದೇ ಇರಬಹುದು ಇದಕ್ಕೆ ಕಾರಣ ಇಷ್ಟೆ..


ಕಳೆದ ಹತ್ತು ದಿನದ ಹಿಂದೆ ಶಾಸಕರು ತನ್ನ ಕಚೇರಿಯಲ್ಲಿ ನಗರಸಭಾ ಕಮಿಷನರ್ ಮತ್ತು ಇಂಜನಿಯರ್‌ಗಳನ್ನು ಕರೆಸಿ ಸಭೆ ನಡೆಸಿದ್ದರು. ಪುತ್ತೂರು ನಗರದ ಹಲವು ಕಡೆ ರಸ್ತೆಯಲ್ಲಿ ಹೊಂಡಗಳು ಬಿದ್ದಿದವು. ಈ ಬಾರಿ ವಿಪರೀತ ಮಳೆಯಾಗುತ್ತಲೇ ಇರುವ ಕಾರಣ ಹೊಂಡ ಮುಚ್ಚಲು ಸಾದ್ಯವಾಗಿರಲಿಲ್ಲ. ಮಳೆ ಬರುವ ಕಾರಣ ತೇಪೆ ಹಾಕಲು ಸಾಧ್ಯವಿಲ್ಲ ಎಂದು ಇಂಜನಿಯರ್‌ಗಳು ಹೇಳಿದ್ದರು. ಮಳೆ ಮುಗಿದ ಬಳಿಕವೂ ಕಾಮಗಾರಿ ನಡೆಸದೇ ಇರುವುದನ್ನು ಕಂಡು ಶಾಸಕರು ಸಭೆ ಕರೆದಿದ್ದರು. ಸಭೆಯಲ್ಲಿ ತೇಪೆ ಕಾಮಗಾರಿಯನ್ನು ಯಾವಾಗ ಆರಂಭ ಮಾಡುತ್ತೀರಿ ಎಂದು ಕೇಳಿದಾಗ ಮೂರು ದಿನದೊಳಗೆ ಎಲ್ಲಾ ಕಾಮಗಾರಿಯೂ ಪೂರ್ಣಗೊಳ್ಳುತ್ತದೆ ಎಂದು ಕಮಿಷನರ್ ಶಾಸಕರಿಗೆ ತಿಳಿಸಿದ್ದರು.


ಆದರೆ ಆ ಬಳಿಕ ಶಾಸಕರು ವಿದೇಶ ಪ್ರವಾಸ ಮುಗಿಸಿ ಬರುವಾಗಲೂ ಕಾಮಗಾರಿ ಆರಂಭವಾಗಿರಲಿಲ್ಲ. ಇದು ಶಾಸಕರನ್ನು ಆಕ್ರೋಶಗೊಳಿಸಿದೆ. ನಾನು ಅಷ್ಟೊಂದು ಕ್ಲಿಯರಾಗಿ ಹೇಳಿದ್ದೇನೆ, ಆದರೂ ನನ್ನ ಮಾತಿಗೆ ಬೆಲೆಯೇ ಕೊಟ್ಟಿಲ್ಲ, ನನ್ನ ಮಾತನ್ನು ಹಗುರವಾಗಿ ಯಾಕೆ ಪರಿಗಣಿಸಿದ್ದೀರಿ? ರಸ್ತೆ ಹೊಂಡ ಮುಚ್ಚಲು ಹಣದ ಕೊರತೆಯಿಲ್ಲ, ಅಧಿಕಾರಿಗಳು ಕೆಲಸ ಮಾಡದಿದ್ದರೆ ಯಾರು ಮಾಡುವುದು? ಜನ ಕಷ್ಟಪಡುತ್ತಿರುವಾಗ ನಾನು ಸುಮ್ಮನೆ ಇರಬೇಕಾ ಎಂದು ಆಕ್ರೋಶಗೊಂಡ ಶಾಸಕರು ಪುತ್ತೂರು ನಗರದ ರಸ್ತೆಗಳು ಚೆನ್ನಾಗಿರಬೇಕು, ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಅಧಿಕಾರಿಯನ್ನು ತರಾಠೆಗೆ ಎತ್ತಿಕೊಂಡಿದ್ದಾರೆ ಎಂಬುದು ಸ್ಪಷ್ಟ.

LEAVE A REPLY

Please enter your comment!
Please enter your name here