ನೆಟ್ಟಣಿಗೆಮುಡ್ನೂರು ವಾರ್ಷಿಕ ಕ್ರೀಡಾ ಸನ್ಮಾನ ಮತ್ತು ಸಾಧಕ ಕ್ರೀಡಾಪಟುಗಳಿಗೆ ಪದಕ ವಿತರಣೆ
ಪುತ್ತೂರು: ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟವು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಫೌಝಿಯಾ ಇಬ್ರಾಹಿಂ ರವರು ಮಾತನಾಡಿ ಮಕ್ಕಳಲ್ಲಿ ಇರುವ ಪ್ರತಿಭೆಗಳ ಅನಾವರಣಕ್ಕೆ ಕ್ರೀಡಾಕೂಟ ಉತ್ತಮ ವೇದಿಕೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಮಹತ್ತರ ಪಾತ್ರ ವಹಿಸುತ್ತದೆ. ಸಾಧನೆ ಮಾಡಬೇಕಾದರೆ ಶ್ರಮ ಬೇಕು. ಸರಕಾರದ ಯೋಜನೆಗಳು ಈ ಪರಿಸರದಲ್ಲಿ ಸರಿಯಾಗಿ ಅನುಷ್ಠಾನ ಗೊಂಡಿದೆ ಎಂದು ಹೇಳಿದರು.
ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆ ಯ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಶ್ರೀರಾಮ್ ಪಕ್ಕಳ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಶಾಸಕರಾದ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಘೋಷಣೆಯನ್ನು ಮಾಡಿದ್ದಾರೆ. ಜನರ ಅಪೇಕ್ಷೆಯಂತೆ ಹಂತ ಹಂತವಾಗಿ ಪಾಲಿಟೆಕ್ನಿಕ್, ಐ ಟಿ ಐ ಈ ಪ್ರದೇಶಕ್ಕೆ ಬರಬಹುದು ಎಂದರು. ಎಲ್ಲರ ಸಹಕಾರದಿಂದ ಕ್ರೀಡಾಕೂಟ ಉತ್ತಮವಾಗಿ ಯಶಸ್ವಿಯಾಗಿ ನಡೆಯುತ್ತಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮ ಉಪಾಧ್ಯಕ್ಷ ರಾಮ ಮೇನಾಲ ಧ್ವಜಾರೋಹಣ ಮಾಡಿ ಪ್ರತಿನಿತ್ಯ ಆಟವನ್ನು ಆಡುವುದರಿಂದ ವ್ಯಾಯಾಮ ಮತ್ತು ಮನಸ್ಸು ಚುರುಕುಗೊಳ್ಳುತ್ತದೆ. ಶಾಲೆಯಲ್ಲಿ ಆಟದ ತರಗತಿಯನ್ನು ಉಪಯೋಗಿಸಿಕೊಳ್ಳಬೇಕು. ಈ ಶಾಲೆಯು ಪಠ್ಯ ಮತ್ತು ಸಹಪಠ್ಯ ಚಟುವಟಿಕೆಯಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಸುಭಾಷ್ ಚಂದ್ರ ರೈ ತೋಟ ಇವರು ಧ್ವಜವಂದನೆ ಸ್ವೀಕರಿಸಿ ಶಾಲಾ ವತಿಯಿಂದ ಸನ್ಮಾನ ಸ್ವೀಕರಿಸಿ ಶ್ರೀರಾಮ ಪಕ್ಕಳ ಇವರ ನೇತೃತ್ವದಲ್ಲಿ ಶಾಲೆ ಅಭಿವೃದ್ಧಿಗೊಳ್ಳುತ್ತಾ ಹೋಗುತ್ತಿದೆ. ಕ್ರೀಡೆಯಲ್ಲಿ ಎಲ್ಲರೂ ತೊಡಗಿಸಿ ಕೊಂಡು ಬಂದರೆ ದೈಹಿಕವಾಗಿ ಸದೃಢವಾಗಿರುತ್ತಾನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಉದ್ಯಮಿ ರಾಧಾಕೃಷ್ಣ ರೈ ಅರಿಯಡ್ಕ ಅಗಲ್ಪಾಡಿ ಮಾತನಾಡಿ, ಕ್ರೀಡೆ ಬದುಕಿನ ಭಾಗವಾಗಿದೆ. ಸೋಲು ಗೆಲುವು ಸಹಜ. ಕ್ರೀಡಾ ಮನೋಭಾವನೆಯೊಂದಿಗೆ ತೊಡಗಿಸಿ ಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಸುಭಾಶ್ಚಂದ ರೈ ತೋಟ ಮತ್ತು ಉದ್ಯಮಿಗಳಾದ ರಾಧಾಕೃಷ್ಣ ರೈ ಅರಿಯಡ್ಕ ಅಗಲ್ಪಾಡಿರನ್ನು ಸನ್ಮಾನಿಸಲಾಯಿತು.
ನೆಟ್ಟಣಿಗೆ ಮುಡ್ನೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ರಮೇಶ್ ಶಿರ್ಲಾಲ್. ಪತ್ರಕರ್ತರಾದ ಮಾಧವ ನಾಯಕ್ ಇಂದಾಜೆ. ನಿವೃತ್ತ ಮುಖ್ಯ ಗುರುಗಳಾದ ಕುಂಞ್ಞಿರಾಮ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ, ಸರ್ವೋದಯ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ಸುಕೇಶ್ ರೈ, ಶಿಕ್ಷಕರಾದ ಸುಹಾಸ್ ಸುಳ್ಯಪದವು, ಷಣ್ಮುಖ ದೇವ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಸಾದ್ ಶುಭ ಹಾರೈಸಿದರು.
ವೇದಿಕೆಯಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಪಲ್ಲತ್ತೂರು, ವೆಂಕಪ್ಪ ನಾಯ್ಕ ಮೇನಾಲ, ಶಿಕ್ಷಣದ ತಜ್ಞರಾದ ಸದಾಶಿವ ರೈ ನಡುಬೈಲು, ಮಹಾಬಲ ರೈ ಕರ್ನೂರು, ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ರವಿಕಿರಣ್ ಶೆಟ್ಟಿ ಬೆದ್ರಾಡಿ, ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ್ ರೈ ಸಜಂಕಾಡಿ, ಮಹಮ್ಮದ್ ಪಳ್ಳತ್ತೂರು, ಅಬ್ದುಲ್ ಮೆಣಸಿನಕಾನ, ಎಸ್ ಡಿ ಎಂ ಸಿ ಸದಸ್ಯರಾದ ಬಿ ಎಚ್ ಸೂಪಿ, ಪ್ರಮುಖರಾದ ಮೂಸಾನ್, ಅಬ್ದುಲ್ಲ, ಅಬ್ದುಲ್ ಖಾದರ್ ಸುರುಳಿ ಮೂಲೆ, ರೈತ ಸಂಘದ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ, ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಅಝೀಜ್, ಬಶೀರ್, ಹನೀಫ್, ಪ್ರವೀಣ್ ರೈ ಮೇನಾಲ, ಖಾದರ್ ಕೋಡಿಯಡ್ಕ, ಸುಭಾಷ್ ಚಂದ್ರ ರೈ ಕರ್ನೂರು, ನಾರಾಯಣ ನಾಯ್ಕ, ಮುಂದಾಳುಗಳಾದ ರಾಜೇಶ್ ಪಂಚೋಡಿ, ಪ್ರಜ್ವಲ್ ಪುರ, ಬಾಲಕೃಷ್ಣರೈ ಕರ್ನೂರು, ಸುರೇಶ್ ರೈ ಪತ್ತಯ ಉಪಸ್ಥಿತರಿದ್ದರು . ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಊರಿನ ಪ್ರಮುಖರು ವಿದ್ಯಾ ಅಭಿಮಾನಿಗಳು ಕಾರ್ಯಕ್ರಮದುದ್ದಕ್ಕೂ ಭಾಗವಹಿಸಿದ್ದರು.
ಮುಖ್ಯ ಗುರುಗಳಾದ ಪ್ರೇಮ್ ಕುಮಾರ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಇಂದಿರಾ ಕ್ರೀಡಾಕೂಟದ ಉದ್ಘೋಷಣೆ ಮಾಡಿದರು. ಶಿಕ್ಷಕಿಯರಾದ ಮೀನಾಕ್ಷಿ, ಪ್ರೀತು, ದಮಯಂತಿ ಹಾಗೂ ಪ್ರಶಿಕ್ಷಣಾರ್ಥಿಗಳಾದ ಕೃತಿಕ, ಜಯಶ್ರೀ ವಿವಿಧ ಕಾರ್ಯಕ್ರಮದಲ್ಲಿ ಸಹಕರಿಸಿದರು. ಗಣಿತ ಶಿಕ್ಷಕರಾದ ಪುರುಷೋತ್ತಮ ಬಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ದೇವಿ ಪ್ರಕಾಶ್ ಶೆಟ್ಟಿ ಕುತ್ಯಾಳ ಕಾರ್ಯಕ್ರಮ ನಿರ್ವಹಿಸಿದರು.