ಶಾಸಕ ಅಶೋಕ್ ರೈ ಬ್ಯಾನರ್‌ಗೆ ಹಾನಿ : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಕಾಂಗ್ರೆಸ್ ಮುಖಂಡರು

0

ಪುತ್ತೂರು: ಮಂಜಲ್ಪಡ್ಪುವಿನಲ್ಲಿ ಹಾಕಲಾಗಿದ್ದ ಶಾಸಕ ಅಶೋಕ್ ರೈ ಅವರ ಬ್ಯಾನರ್‌ಗೆ ಹಾನಿಯುಂಟು ಮಾಡಿದ್ದಲ್ಲದೆ ಬ್ಯಾನರನ್ನು ಹರಿದು ಹಾಕಲಾಗಿದ್ದು, ಬ್ಯಾನರ್ ಹರಿದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಸುದಾನ ಶಾಲೆಯ ಬಳಿ ಇರುವ ಓವರ್ ಬ್ರಿಡ್ಜ್ ಬಳಿ ಶಾಸಕರ ಚಿತ್ರವನ್ನು ಹಾಕಿದ ಬ್ಯಾನರ್ ಹಾಕಲಾಗಿದ್ದು, ಈ ಬ್ಯಾನರನ್ನು ಹಲವು ಬಾರಿ ಹರಿದು ಹಾಕಲಾಗಿದೆ. ಇಂತಹ ಕೃತ್ಯವೆಸಗಿದವರಿಗೆ ದೇವರೇ ತಕ್ಕ ಬುದ್ದಿ ಅಥವಾ ಶಿಕ್ಷೆಯನ್ನು ಕರುಣಿಸಲಿ ಎಂದು ಪ್ರಾರ್ಥನೆ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ, ನಗರವಲಯ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಪಡ್ಡಾಯೂರು, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಪವಿತ್ರ ರೈ ಆರ್ಯಾಪು, ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here