ಡಾ.ಚೌಕಾರು ಪರಮೇಶ್ವರ ಭಟ್ ನಿಧನ

0

ಪುತ್ತೂರು: ನೀರ್ಚಾಲು ಸಮೀಪದ ಚೌಕಾರು ವೈದ್ಯ ಕುಟುಂಬದ ಚೌಕಾರು ಪರಮೇಶ್ವರ ಭಟ್ (91ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ನ.24 ರಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕೊಡಗಿನ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆಗೈದ ಇವರು ಸರಳ ಸಾತ್ವಿಕ ಸ್ವಭಾವದಿಂದಾಗಿ ಜನ ಮನ ಗೆದ್ದವರು. ನಿವೃತ್ತಿಯ ನಂತರ ಪುತ್ತೂರಿನ ತಿಂಗಳಾಡಿಯಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದರು. ಕೊನೆಯ ವರ್ಷಗಳನ್ನು ಬೆಂಗಳೂರಿನಲ್ಲಿ ನೆಲೆಸಿದ ಮಗನೊಂದಿಗೆ ಕಳೆದಿದ್ದರು. ಮೃತರು ಪತ್ನಿ ಸುಮತಿ, ಪುತ್ರ ಡಾ. ಮುರಲೀಧರ ಮತ್ತು ಪುತ್ರಿ ಡಾ. ಶೋಭಾದೇವಿ ಕಾಟಿಪ್ಪಳ್ಳ ಹಾಗೂ ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here