ಪುತ್ತೂರು: ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಜರುಗಿತು. ಅತಿಥಿ ನಿವೃತ್ತ ಉಪತಹಶೀಲ್ದಾರರು ಹಾಗೂ ಹಿರಿಯ ವಿದ್ಯಾರ್ಥಿ ರಾಮಣ್ಣ ನಾಯ್ಕ ಕ್ರೀಡಾ ಧ್ವಜಾರೋಹಣವನ್ನು ಮಾಡಿ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು.
ಇನ್ನೋರ್ವ ಅತಿಥಿ ಶಾಲೆಯ ಹಿರಿಯ ವಿದ್ಯಾರ್ಥಿ , ಹಾಗೂ ಕಬಡ್ಡಿ ತರಬೇತಿದಾರ ಯಶವಂತ ಕೆ ಸಿ ಇವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ಮುಖ್ಯ ಗುರು ವನಿತಾ ಕೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಮುರಳಿ ಮೋಹನ ಶೆಟ್ಟಿ ಸ್ವಾಗತಿಸಿ,ವಂದಿಸಿದರು. ಕನ್ನಡ ಶಿಕ್ಷಕ ಸುರೇಶ್ ಪಾಣ ಹಾಗೂ ನಿರೂಪಣೆಯನ್ನು ಗಣಿತ ಶಿಕ್ಷಕಿ ವಿನುತ ನಿರ್ವಹಿಸಿದರು.
