ಪುತ್ತೂರು: ದ.ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲ ಬಿ.ಸಿ ರೋಡ್ ಇವರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಹಾಮಂಡಲದ ನಿರ್ದೇಶಕರಾದ ವಿಜಯಕುಮಾರ್ ಸೊರಕೆ, ಶೈಲಜಾ ರಾಜೇಶ್ ರವರಿಗೆ ಸನ್ಮಾನಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆದ ಮಹಾಮಂಡಲದ ಮಹಾಸಭೆಯಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಮಹಾಮಂಡಲದ ಅಧ್ಯಕ್ಷ ಕೆ ಸಂಜೀವ ಪೂಜಾರಿ, ಉಪಾಧ್ಯಕ್ಷ ರಾಜೇಶ್ ಸುವರ್ಣ, ನಿರ್ದೇಶಕರಾದ ವಿಶ್ವನಾಥ್ ಬಿ, ಅಣ್ಣಿ ಯಾನೆ ನೊಣಯ್ಯಾ ಪೂಜಾರಿ, ಆರ್ ಸಿ ನಾರಾಯಣ, ಬೇಬಿ ಕುಂದರ್, ಗಣೇಶ್ ಪೂಜಾರಿ, ಶೈಲಜಾ ಕೆ, ವಿಶ್ವನಾಥ ಪಂಜ, ಸಿಇಒ ಕಿಶೋರ್ ಕುಮಾರ್ ರವರು ಉಪಸ್ಥಿತರಿದ್ದರು.
