ಆಂಜನೇಯ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಡಿ.25ರಂದು ನಡೆಯುವ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ ಶ್ರೀ ಆಂಜನೇಯ -57 ಇದರ ಆಮಂತ್ರಣ ಪತ್ರವನ್ನು ಡಿ.1ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ನಡೆದ ಸರಣಿ ತಾಳಮದ್ದಳೆಯಲ್ಲಿ ಬಿಡುಗಡೆಗೊಳಿಸಲಾಯಿತು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಗುಡ್ಡೆಯವರು ಆಮಂತ್ರಣ ಪತ್ರ ಬಿಡಗುಡೆಗೊಳಿಸಿ ಶುಭಹಾರೈಸಿದರು. ಆಮಂತ್ರಣ ಪತ್ರವನ್ನು ದೇವರ ನಡೆಯಲ್ಲಿ ಇಟ್ಟು ಪ್ರಾರ್ಥನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಆಂಜನೇಯ ಉಭಯ ಸಂಘದ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಸಂಘದ ವತಿಯಿಂದ ತಾಳಮದ್ದಳೆ “ಪಂಚವಟಿ”ಪ್ರಸಂಗ ನಡೆಯಿತು. ಹಿಮ್ಮೇಳದಲ್ಲಿ ಯಲ್. ಯನ್. ಭಟ್ ಬಟ್ಯಮೂಲೆ , ನಿತೀಶ್ ಎಂಕಣ್ಣಮೂಲೆ,ಮುರಳೀಧರ ಕಲ್ಲೂರಾಯ , ಅಚ್ಯುತ ಪಾಂಗಣ್ಣಾಯ ,ಸಮರ್ಥ ವಿಷ್ಣು ಅನೀಶ್ ಕೃಷ್ಣ ಪುಣಚ, ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ ( ಗುಂಡ್ಯಡ್ಕ ಈಶ್ವರ ಭಟ್ ), ಮುನಿಗಳು (ಭಾಸ್ಕರಬಾರ್ಯ), ಲಕ್ಷ್ಮಣ ( ದುಗ್ಗಪ್ಪ ನಡುಗಲ್ಲು ), ಸೀತೆ ( ಮಾಂಬಾಡಿ ವೇಣುಗೋಪಾಲ ಭಟ್), ಘೋರ ಶೂರ್ಪನಖಿ (ಗುಡ್ಡಪ್ಪ ಬಲ್ಯ ), ಮಾಯಾ ಶೂರ್ಪನಖಿ ( ಭಾಸ್ಕರ ಶೆಟ್ಟಿ ಸಾಲ್ಮರ) ಸಹಕರಿಸಿದರು. ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here