




ಪುತ್ತೂರು: ಕೆಮ್ಮಾಯಿ ಭರತಪುರದ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ವತಿಯಿಂದ ಊರ, ಪರವೂರ ಸಹೃದಯ ದಾನಿಗಳ ಸಹಕಾರದಿಂದ ಕಿಡ್ನಿ, ಡಯಾಲಿಸಿಸ್ ರೋಗಿಗಳಿಗೆ ನೀಡಲಾಗುವ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯ 42ನೇ ಯೋಜನೆಯ ಕಾರ್ಯಕ್ರಮ ಸೇವಾಶ್ರಮದಲ್ಲಿ ನಡೆಯಿತು.



ಮುಖ್ಯ ಅತಿಥಿ, ಪುತ್ತೂರು ಪ್ರಗತಿ ಸ್ಟಡಿ ಸೆಂಟರ್ ಮುಖ್ಯಸ್ಥರಾದ ಗೋಕುಲ್‌ನಾಥ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೊಂದವರ ಪಾಲಿಗೆ ಈ ಟ್ರಸ್ಟ್ ದಾರಿದೀಪವಾಗಿದೆ. ಮುಂದಿನ ದಿನಗಳಲ್ಲಿ ಆಶ್ರಮ ಉದ್ಘಾಟನೆ ಆಗುವ ಶಕ್ತಿಯೂ ಬೇಗನೆ ಬರಲಿ ಎಂದು ಆಶಿಸಿದರು. ಪ್ರಗತಿ ಸ್ಟಡಿ ಸೆಂಟರ್ ಪ್ರಾಂಶುಪಾಲರಾದ ಹೇಮಲತಾ ಗೋಕುಲ್‌ನಾಥ್ ಮಾತನಾಡಿ, ಕಿಟ್ ವಿತರಣೆಗೆ ಧನಸಹಾಯ ಮಾಡುತ್ತಿದ್ದೆ. ಬಳಿಕ ಪ್ರತೀ ತಿಂಗಳು ಅಕ್ಕಿ ರೂಪದಲ್ಲಿ ಸಹಾಯ ನೀಡುತ್ತಿದ್ದೆ. ಅಶಕ್ತರಿಗೆ ಇದರಿಂದ ಒಂದು ಹೊತ್ತು ಗಂಜಿ ಊಟ ಮಾಡಲು ಸಹಾಯವಾಗುತ್ತದೆ. ಮುಂದೆಯೂ ಸಹಕಾರ ನೀಡುತ್ತೇನೆ ಎಂದರು. ನಿವೃತ್ತ ಶಿಕ್ಷಕಿ ರೇವತಿ ಮಾತನಾಡಿ ತಂಡದವರು ಜನರಿಗೋಸ್ಕರ ಕಷ್ಟ ಪಡುತ್ತಿದ್ದಾರೆ. ಅವರಿಗೆ ದೇವರು ಆರೋಗ್ಯ ಕೊಡಲಿ ಎಂದರು.






ಅಧ್ಯಕ್ಷತೆ ವಹಿಸಿದ್ದ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ಸ್ಥಾಪಕರಾದ ಚೇತನ್ ಮಾತನಾಡಿ ಸಂಸ್ಥೆ ಕಳೆದ 9 ವರ್ಷದಿಂದ ನಡೆಯುತ್ತಿದೆ. ದಾನಿಗಳಿಂದ ಸಂಸ್ಥೆ ನಿಂತಿದೆ. ಕರ್ಮಕ್ಕೆ ಅನುಸಾರವಾಗಿ ನಾವು ಭೂಮಿಯಲ್ಲಿ ಬದುಕುತ್ತಿದ್ದೇವೆ. ಜೀವನದಲ್ಲಿ ನೊಂದವರಿಗೆ ಸಹಾಯ ಮಾಡಿ. ನಿಮಗೂ ಇದರಿಂದ ಒಳ್ಳೆಯ ಫಲ ಸಿಗುತ್ತದೆ. ಮುಂದೆಯೂ ನಿಮ್ಮ ಸಹಕಾರ ಇರಲಿ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ರಾಧ ರೆಸಿಡೆನ್ಸಿಯ ಮಾಲಕರಾದ ಪ್ರವೀಣ್ ಕೆಮ್ಮಾಯಿ, ಟ್ರಸ್ಟಿಗಳಾದ ಶ್ರೀಧರ್ ಮಡಿವಾಳ, ರಾಧಾ ನಾರಾಯಣ ಬಾಳಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೃಷ್ಣಪ್ಪ ಶಿವನಗರ ಪ್ರಾಸ್ತಾವಿಕ ಮಾತನಾಡಿದರು. ಸೇವಾಶ್ರಮದ ಸದಸ್ಯರಾದ ರಾಧಿಕಾ, ಆತ್ಮಿ, ಹರ್ಷಿಕಾ ಪ್ರಾರ್ಥಿಸಿದರು. ರಾಧಿಕಾ ಸ್ವಾಗತಿಸಿ ವನಿತ ವಂದಿಸಿದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಸೇವಾಶ್ರಮದ ಅಧ್ಯಕ್ಷೆ ಶೋಭಾಚೇತನ್, ಸದಸ್ಯರುಗಳಾದ ಹರ್ಷಿತ, ಆತ್ಮಿ, ವನಿತಾ, ಕಾವ್ಯ ಹೆಗಡೆ, ರಾಧಿಕಾ, ಧನಂಜಯ, ರಂಜಿತ್, ಭುವನ, ದೀಕ್ಷಾ, ವಸಂತಿ, ರಕ್ಷಾ, ಕೃಪಾ, ಕಾವ್ಯ ಈಶ್ವರಮಂಗಲ, ಶಮನ್ ಆಚಾರ್ಯ ಉಪಸ್ಥಿತರಿದ್ದರು.
22 ಕುಟುಂಬಗಳಿಗೆ ಕಿಟ್ ವಿತರಣೆ
ದಾನಿಗಳಿಂದ ಸಂಗ್ರಹಿಸಿದ ಧನಸಹಾಯದಲ್ಲಿ 22 ಮಂದಿ ಫಲಾನುಭವಿಗಳಿಗೆ ಗಣ್ಯರು ಆಹಾರ ಕಿಟ್ ವಿತರಿಸಿದರು. ಕಿಟ್ ಸ್ವೀಕರಿಸಿದ ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಕಲಾವಿದ ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.








