ಪುತ್ತೂರು: ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದ ರಾಮಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಕ್ಷೇಮ ಮೆಡಿಕಲ್ ಶುಭಾರಂಭಗೊಂಡಿತು.
ಸಂಸ್ಥೆಯನ್ನು ಸಿದ್ದಪ್ಪ ಗೌಡ ಬಜತ್ತೂರುರವರು ಉದ್ಘಾಟಿಸಿದರು. ಮುತ್ತಪ್ಪ ಗೌಡ ಅಗ್ಪಲರವರು ಸಂಸ್ಥೆಗೆ ಶುಭಹಾರೈಸಿದರು, ರೋಹಿನಾಥ ಗೌಡ ಅಗ್ಪಲ, ಯಶೋಧ ಆರ್ ಗೌಡ, ಶ್ರೀಕಾಂತ್ ನಡ್ಜೀರ್,ಯಶೋಧ ಸಿದ್ದಪ್ಪ ಗೌಡ ಆನೆಮನೆ, ಮೋಹಿನಿ ಬಾಲಕೃಷ್ಣ ಗೌಡ ಅಗ್ಪಲ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರರಾದ ಶೈಲೇಶ್ ಕುಮಾರ್ ಅಗ್ಪಲ ರವರು ಸ್ವಾಗತಿಸಿ, ಗ್ರಾಹಕ ಬಾಂಧವರು ಸೇವೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಸಂಸ್ಥೆಯ ಪಾಲುದಾರರಾದ ಮಣಿಮಾಲ ಶ್ರೀಕಾಂತ್ ನಡ್ಜೀರ್ ರವರು ವಂದಿಸಿದರು.
