




ಪುತ್ತೂರು: ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ(ರಿ)ಯು ಕೊಡ್ತಮೊಗೆರಿನ ಟಾಪ್ ಎಂಡ್ ಟಾಪ್ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ನಡೆಸಿದ ರಾಜ್ಯಮಟ್ಟದ “ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ” ಗೆ ಸುದಾನ ಶಾಲೆಯ ಸಹ ಶಿಕ್ಷಕಿ ಕವಿತಾ ಅಡೂರುರವರಿಗೆ ರಾಜ್ಯಮಟ್ಟದ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ ಲಭಿಸಿದೆ.




ನ.30 ರಂದು ಸಾಲೆತ್ತೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕವಿತಾ ಅಡೂರುರವರಿಗೆ ರಾಜ್ಯಮಟ್ಟದ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶಿಕ್ಷಕಿ ಕವಿತಾ ಅಡೂರುರವರ ಸಾಧನೆಗೆ ಶಾಲಾ ಸಂಚಾಲಕರಾದ ರೆ| ವಿಜಯ ಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್ ಅವರು ಅಭಿನಂದಿಸಿದ್ದಾರೆ.











