ಪುತ್ತೂರು: ಇಲ್ಲಿನ ನೆಲ್ಲಿಕಟ್ಟೆಯಲ್ಲಿ ಇಬ್ಬರು ಯುವಕರ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವ ಘಟನೆ ವರದಿಯಾಗಿದೆ.ಈ ಸಂಬಂಧ ಪ್ರಸಾದ್ ಶೆಟ್ಟಿ ಬನ್ನೂರು ಮತ್ತಿಬ್ಬರ ವಿರುದ್ದ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೆಲ್ಲಿಕಟ್ಟೆ ಎಂಎನ್‌ಎಸ್ ಕಂಪೌಂಡ್ ನಿವಾಸಿ ದಿ.ಪ್ರಭಾಕರ ಶೆಟ್ಟಿ ಎಂಬವರ ಮಗ ಪ್ರಶಾಂತ್ (39ದ.) ಎಂಬವರು ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
‘ ಡಿ.4ರಂದು ತಮ್ಮ ಸಂಬಂಧಿ ಅಭಿಜಿತ್ ಶೆಟ್ಟಿ ಎಂಬವರ ಮದರಂಗಿ ಕಾರ್ಯಕ್ರಮ ಇದ್ದುದರಿಂದ ನಾನು ಮತ್ತು ಗೌರವ್ ಶೆಟ್ಟಿ ಇಬ್ಬರು ಮದರಂಗಿ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿ ರಾತ್ರಿ 11.30 ಗಂಟೆಗೆ ನೆಲ್ಲಿಕಟ್ಟೆ ಬಾರ್ ಬಳಿನಿಂತು ಕೊಂಡು ಮಾತನಾಡುತ್ತಿರುವಾಗ ಅಲ್ಲಿಗೆ ಮೋಟಾರ್ ಸೈಕಲ್ (ಕೆಎ-21:ಎಸ್ 8925) ನಲ್ಲಿ ಬಂದ ಮೂವರು ಮೋಟಾರು ಸೈಕಲನ್ನು ನಿಲ್ಲಿಸಿ ಇಳಿದು ತಾನು ನಿಂತಲ್ಲಿಗೆ ಬಂದು ತನ್ನನ್ನು ಗುರಾಯಿಸಿ ನೋಡಿದಾಗ,ಏನು ವಿಷಯ ಎಂದು ಕೇಳಿದೆ. ಆ ಸಂದರ್ಭ ಪ್ರಸಾದ್ ಶೆಟ್ಟಿ ಎಂಬಾತ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದು, ನನ್ನ ಬಲಕೈಯ ಕಿರುಬೆರಳಿಗೆ ಹಲ್ಲಿನಿಂದ ಕಚ್ಚಿ ರಕ್ತ ಗಾಯಗೊಳಿಸಿದ್ದಲ್ಲದೇ,ಕಲ್ಲಿನಿಂದ ಎಡಕೈಗೆ ಹೊಡೆದು ಗೌರವ್ ಶೆಟ್ಟಿಯವರಿಗೂ ಹಲ್ಲಿನಿಂದ ಬಲ ಕೈಯ ಕೋಲು ಕೈಗೆ ಕಚ್ಚಿ ರಕ್ತಗಾಯಗೊಳಿಸಿ ಇಬ್ಬರಿಗೂ ಕೈಯಿಂದ ಹಲ್ಲೆ ನಡೆಸಿ ನೋವುಂಟು ಮಾಡಿ ಅವರು ಮೂರು ಜನಸೇರಿ ಮುಂದಕ್ಕೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ’ ಎಂದು ಪ್ರಶಾಂತ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಅವರು ಸಂಬಂಧಿ ಅಭಿಜಿತ್ ಶೆಟ್ಟಿಯವರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.ಆರೋಪಿಗಳಾದ ಪ್ರಸಾದ್ ಶೆಟ್ಟಿ ಬನ್ನೂರು ಮತ್ತೋರ್ವರು ಅಪರಿಚಿತರ ವಿರುದ್ಧ ಪುತ್ತೂರು ನಗರ ಪೊಲೀಸರು ಕಲಂ115(1),118(2),352, 351(2),351(3) R/w3(5) ಬಿ ಎನ್ ಎಸ್ 2023ರಂತೆ ಪ್ರಕರಣ( ಅ.ಕ್ರ0121/2025)ದಾಖಲಿಸಿಕೊಂಡಿದ್ದಾರೆ.
