ರೋಟರಿ ಈಸ್ಟ್ ನಿಂದ ರೋಟರಿ ಜಿಲ್ಲಾ ಕ್ರೀಡಾಕೂಟ “ಖೇಲ್ ಮಿಲನ್” ಯಶಸ್ವಿ ಸಂಪನ್ನ

0

ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಆಶ್ರಯದಲ್ಲಿ ರೋಟರಿ ಜಿಲ್ಲಾ ಕ್ರೀಡಾಕೂಟ “ಖೇಲ್ ಮಿಲನ್-2025” ಡಿ.6 ಹಾಗೂ 7 ರಂದು ದರ್ಬೆ ಫಿಲೋಮಿನಾ ಕಾಲೇಜು ಕ್ರೀಡಾಂಗಣ, ಸುದಾನ ಸ್ಪೋರ್ಟ್ಸ್ ಕ್ಲಬ್, ದಿ ಪುತ್ತೂರು ಕ್ಲಬ್ ಇಲ್ಲಿ ನಡೆಯಿತು.

ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದ ಉದ್ಘಾಟನೆಯನ್ನು    ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ ಹಾಗೂ ಮಾಜಿ ಜಿಲ್ಲಾ ಗವರ್ನರ್ ಕೃಷ್ಣ ಶೆಟ್ಟಿರವರು ಶಾಂತಿಯ ಪ್ರತೀಕವಾದ ಪಾರಿವಾಳ ಹಾಗೂ ಬಲೂನ್ ಗೊಂಚಲನ್ನು ಆಗಸಕ್ಕೆ ಹಾರಿಸಿ ನೆರವೇರಿಸಿದರು. ಬಳಿಕ ಮಾತನಾಡಿದ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ.ರವರು ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹಳ ಸಹಕಾರಿ. ರೊಟೇರಿಯನ್ಸ್ ಗಳು ವಾರವಿಡೀ ತಮ್ಮ ಕೆಲಸದ ಒತ್ತಡದಿಂದ ವ್ಯಾಯಾಮದತ್ತ ಸಮಯ ನೀಡಲು ಅಸಾಧ್ಯವಾಗುತ್ತದೆ. ರೋಟರಿ ಈಸ್ಟ್ ಕ್ಲಬ್ ರೊಟೇರಿಯನ್ಸ್ ಗಳನ್ನು ಹಾಗೂ ಅವರ ಕುಟುಂಬಿಕರನ್ನು ಒಂದೆಡೆ ಸೇರಿಸಿ ಕ್ರೀಡಾಕೂಟವನ್ನು ಹಮ್ಮಿಕೊಂಡು ರೋಟರಿ ಸದಸ್ಯರಲ್ಲಿ ಹುಮ್ಮಸ್ಸು ಹೆಚ್ಚಿಸಿದ್ದಾರೆ ಎಂದರು. 

ರೋಟರಿ ಪಿಡಿಜಿ ಕೃಷ್ಣ ಶೆಟ್ಟಿ ಮಾತನಾಡಿ, ಪುತ್ತೂರು ಈಸ್ಟ್ ಕ್ಲಬ್ ಕೊನೆ ಕ್ಷಣದಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಂಡು ಉತ್ತಮ ರೀತಿಯಲ್ಲಿ ಸಂಯೋಜನೆ  ಮಾಡಿರುತ್ತಾರೆ. ಕ್ರೀಡಾಂಗಣದಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆ ಇದ್ದರೂ ಕ್ರೀಡಾಕೂಟವನ್ನು ನಿಲ್ಲಿಸಲು ಹೋಗಬೇಡಿ, ಇದು ನಿರಂತರ ಸಾಗಬೇಕು ಎಂದರು.

ಗೌರವ ಅತಿಥಿಗಳಾಗಿ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ, ಜಿಲ್ಲಾ ಪ್ರಾಜೆಕ್ಟ್ ವೈಸ್ ಚೇರ್ಮನ್ ಶಿವರಾಮ ಏನೆಕಲ್, ಇವೆಂಟ್ಸ್ ವಿಭಾಗದ ಇವೆಂಟ್ ಕಾರ್ಯದರ್ಶಿ ಉಮೇಶ್ ಕೆ, ರೋಟರಿ ವಲಯ ಐದರ ವಲಯ ಸೇನಾನಿ ಭರತ್ ಪೈರವರು ಉಪಸ್ಥಿತರಿದ್ದರು.

ಇವೆಂಟ್ಸ್ ಗಳು

ಡಿ.6ರಂದು ಶಟಲ್ ಬ್ಯಾಡ್ಮಿಂಟನ್ 
ಸಾಮೆತ್ತಡ್ಕ ಸುದಾನ ಸ್ಪೋರ್ಟ್ಸ್ ಕ್ಲಬ್, ಟೆನ್ನಿಸ್ ಪಂದ್ಯ ಮರೀಲು ದಿ ಪುತ್ತೂರು ಕ್ಲಬ್, ಡಿ.7 ರಂದು ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ಅಥ್ಲೆಟಿಕ್ಸ್ ಹಾಗೂ ಇತರ ಆಟಗಳು ಜರಗಿತು.

ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಖೇಲ್ ಮಿಲನ್ ವೈಸ್ ಚೇರ್ಮನ್ ಸೂರ್ಯನಾಥ ಆಳ್ವ ಸ್ವಾಗತಿಸಿ, ಖೇಲ್ ಮಿಲನ್  ಚೇರ್ಮನ್ ಎಕೆಎಸ್ ವಿಶ್ವಾಸ್ ಶೆಣೈ ವಂದಿಸಿದರು. ರೋಟರಿ ಸೆಂಟ್ರಲ್ ಪೂರ್ವಾಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಹಾಗೂ ಮಾಜಿ ಕಾರ್ಯದರ್ಶಿ ಡಾ.ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.

ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು…
ರೋಟರಿ ಕ್ಲಬ್  ಸ್ವ-ಹಿತ ಮೀರಿದ ಸೇವೆ ನೀಡುವ ಸಂಸ್ಥೆಯಾಗಿದೆ. ರೋಟರಿ ಸಂಸ್ಥೆಯು ತನ್ನ ಧ್ಯೇಯವಾಗಿರುವ ಫೆಲೋಶಿಪ್ ಗೆ ಬೇಕಾಗಿ ಕ್ರೀಡಾಕೂಟವನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿನ ರೋಟರಿ ಸದಸ್ಯರ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಜಿಲ್ಲಾ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು.
ಶಶಿಧರ್ ಕಿನ್ನಿಮಜಲು, ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಈಸ್ಟ್

6 ಜಿಲ್ಲೆಗಳು ಭಾಗಿ
ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಕ್ಲಬ್ ಈ ಕ್ರೀಡಾಕೂಟದಲ್ಲಿ ಕೊಳ್ಳೇಗಾಲ, ಮೈಸೂರು, ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರದ ರೋಟರಿ ಕ್ಲಬ್ ಗಳ ಪುರುಷರ ಹಾಗೂ ಮಹಿಳೆಯರ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here