





ಬೆಟ್ಟಂಪಾಡಿ: ಅರಿವು ಕೇಂದ್ರ(ಗ್ರಂಥಾಲಯ)ಬೆಟ್ಟಂಪಾಡಿ ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಹಾಗೂ ಗ್ರಂಥಾಲಯ ಸಪ್ತಾಹದ ಅಂಗವಾಗಿ 1 ರಿಂದ 5 ನೇ ತರಗತಿ ಮತ್ತು 6 ರಿಂದ 10 ನೇ ತರಗತಿ ವರೆಗಿನ ಎರಡು ವಿಭಾಗಗಳಲ್ಲಿ ನಡೆಸಲಾದ ನಾಲ್ಕು ಸ್ಫರ್ದೆಗಳ ಬಹುಮಾನ ವಿತರಣೆಯನ್ನು ಡಿ. 7 ರಂದು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಮಾಡಲಾಯಿತು.





ಕನ್ನಡ ಕಥೆ ಹೇಳುವುದು, ಕನ್ನಡ ಅಂದ ಬರಹ, ಆಶುನಟನೆ, ಸ್ಮರಣ ಶಕ್ತಿ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನಿವೃತ್ತ ಮುಖ್ಯಗುರು ವೆಂಕಟರಮಣ ಭಟ್ ಮಂಜುಳಗಿರಿಯವರು ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು 30 ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಗ್ರಂಥಾಲಯ ಮೇಲ್ವಿಚಾರಕಿ ಪ್ರೇಮಲತಾ ಎಲ್ಲರಿಗೂ ಸಿಹಿತಿಂಡಿ ನೀಡಿದರು.













