ಕಲ್ಲರ್ಪೆಯಲ್ಲಿ ಅಮೃತ ಮೆಡಿಕಲ್ಸ್ ಶುಭಾರಂಭ

0

ಪುತ್ತೂರು: ಸಂಟ್ಯಾರ್ ಬಳಿಯ ಕಲ್ಲರ್ಪೆ ಪಾಪ್ಯುಲರ್ ಬ್ರೆಡ್ ಫ್ಯಾಕ್ಟರಿ ಬಳಿ ಅಮೃತ ಮೆಡಿಕಲ್ಸ್ ಡಿ.8ರಂದು ಬೆಳಿಗ್ಗೆ ಶುಭಾರಂಭಗೊಂಡಿತು.


ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಫರ್ಮಾಸಿಟಿಕಲ್ ಅಂಡ್ ಸೈನ್ಸ್‌ನ ಪ್ರಾಂಶುಪಾಲರಾದ ಡಾ|ಗುರುರಾಜ ಎಮ್.ಪಿ.ರವರು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ, ಆರೋಗ್ಯ ಮತ್ತು ನೆಮ್ಮದಿ ಮನುಷ್ಯರಿಗೆ ಜೀವನದಲ್ಲಿ ಅತ್ಯಗತ್ಯ. ಅದನ್ನು ಕಾಪಾಡಿಕೊಳ್ಳುವ ಕರ್ತವ್ಯ ನಮ್ಮ ಕೈಯಲ್ಲಿದೆ. ಎಂದು ಹೇಳಿ ಶುಭಹಾರೈಸಿದರು.

ಯಶವಂತಿ ಮತ್ತು ಪುಂಡರೀಕ ಗೌಡ ಕುರುಂಜಿ, ಮಿಥುನ್ ಕೆ.ಪಿ., ಶೇಷಮ್ಮ ಮತ್ತು ಉಮಾನಾಥ ಗೌಡ, ಜಯಶ್ರೀ ಮತ್ತು ಮಹೇಶ್, ಮಧು, ಭಾಸ್ಕರ ಕುರುಂಜಿ ಹಾಗೂ ಮನೆಯವರು, ಸದಾಶಿವ ಮೂಖಮಲೆ, ಪುನೀತ್ ಗುಡ್ಡಮನೆ ಆಲಟ್ಟಿ ಮತ್ತು ಮನೆಯವರು, ಚೇತನ್ ಡೋಲ್ತಿಲ ಸೇರಿದಂತೆ ಹಲವರು ಆಗಮಿಸಿ ಶುಭಹಾರೈಸಿದರು. ಮಾಲಕರಾದ ಅನುಶ್ರೀ ಮತ್ತು ಮನೋಜ್ ಕುರುಂಜಿ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿ ನಮ್ಮಲ್ಲಿ ಅಲೋಪತಿ, ಆಯುರ್ವೇದ, ಪಶು ವೈದ್ಯಕೀಯ, ಕಾಸ್ಮೆಟಿಕ್ ಹಾಗೂ ಸರ್ಜಿಕಲ್ ಸೇರಿದಂತೆ ಎಲ್ಲಾ ತರಹದ ಔಷಧಿಗಳು ಲಭ್ಯವಿದೆ ಎಂದು ತಿಳಿಸಿ ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here