ಉಪ್ಪಿನಂಗಡಿ: ನಿಟ್ಟೆ ವಿಶ್ವವಿದ್ಯಾಲಯ (ಡೀಮ್ಡ್ ಟು ಬಿ ಯೂನಿವರ್ಸಿಟಿ)ದಿಂದ ಪೆರ್ನೆ ಗ್ರಾಮದ ಬಿಳಿಯೂರು ನಿವಾಸಿ ವರ್ಷಾ ಆಗಸ್ಟಿನ್ ಅವರು ಜೈವಿಕ ವಿಜ್ಞಾನ ವಿಭಾಗದಲ್ಲಿ ಡಾಕ್ಟರ್ ಆಫ್ ಫಿಲೋಸಫಿ (ಪಿಎಚ್ಡಿ.) ಪದವಿಯನ್ನು ಪಡೆದಿದ್ದಾರೆ.
ಡಾ. ವರ್ಷಾ ಆಗಸ್ಟಿನ್ “ರೋಡಂಟ್ ಮಾದರಿಗಳಲ್ಲಿ ಪ್ರೋಟೀನ್ ಕೊರತೆಯ ಔಷಧ ಮತ್ತು ಆಲ್ಕೋಹಾಲ್ ಪರಸ್ಪರ ಕ್ರಿಯೆಯ ಮೇಲೆ ಬೀರುವ ಪರಿಣಾಮ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿರುತ್ತಾರೆ. ಈ ಸಂಶೋಧನೆಗೆ ಡಾ. ಮುರಳಿ ಬಿ ಮಾರ್ಗದರ್ಶಕರಾಗಿದ್ದರು.
ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಪ್ರೊ. ಡಾ. ಶಾಂತಾರಾಮ ಶೆಟ್ಟಿ, ಉಪ ಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ ಪದವಿ ಪ್ರದಾನ ಮಾಡಿದರು. ಡಾ. ವರ್ಷಾ ಬಿಳಿಯೂರು ನಿವಾಸಿಯಾಗಿರುವ ಕೃಷಿ ಮಾರುಕಟ್ಟೆ ಸಮಿತಿಯ ನಿವೃತ್ತ ಕಾರ್ಯದರ್ಶಿ ಅಗಸ್ಟಿನ್ ಡಿಸೋಜಾ ಮತ್ತು ಫೆಲ್ಸಿ ಡಿಸೋಜಾ ರವರ ಪುತ್ರಿ.
