ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ, ರಾಜ್ಯಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆ-2025-26, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದು, ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 17ರ ವಯೋಮಾನದ ಬಾಲಕಿಯರ ಮತ್ತು 4×100 ಮೀ.ರಿಲೇ ಸ್ಪರ್ಧೆಯಲ್ಲಿ ಜಿ.ಎಂ ಕೀರ್ತಿ, ಗುಣಶ್ರೀ, ಪ್ರತೀಕ್ಷಾ ಮತ್ತು ತ್ರಿಷಾ ಇವರ ತಂಡ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ, ರುತಿಕ್ ಉದ್ದ ಜಿಗಿತದಲ್ಲಿ ಐದನೇ ಸ್ಥಾನ ಪಡೆದಿದ್ದಾನೆ.
