




ಪುತ್ತೂರು: ಬದಿಯಡ್ಕದಲ್ಲಿ ಡಿ.6ರಂದು ರಸ್ತೆ ಅಪಘಾತಗೊಂಡು ಪುತ್ತೂರು ಬನ್ನೂರು ನಿವಾಸಿ ಪಂಚಾಕ್ಷರಿ ಲೈಟಿಂಗ್ಸ್ನ ಮಾಲಕ ಗಣೇಶ್ ಗೌಡ ಅವರು ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.




ಬದಿಯಡ್ಕದಲ್ಲಿ ಲೈಟಿಂಗ್ಸ್ ವಿಚಾರದಲ್ಲಿ ಹೋದ ಅವರು ಸ್ಕೂಟರ್ ಅಪಘಾತಗೊಂಡು ತೀವ್ರ ಗಾಯಗೊಂಡಿದ್ದರು. ಗಾಯಾಳುವನ್ನು ಸ್ಥಳೀಯರು ಸೇರಿ ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅವರನ್ನು ಮಂಗಳೂರು ಯೆನಪೋಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತಲೆಗೆ ತೀವ್ರ ಗಾಯಗೊಂಡ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಆರ್ಥಿಕ ನೆರವನ್ನು ಮನೆಯವರು ಯಾಚಿಸಿದ್ದಾರೆ.














