




ಉಪ್ಪಿನಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಉಪ್ಪಿನಂಗಡಿ ಬ್ಲಾಕ್ ಸಮಿತಿಯ ಕ್ರೀಡೋತ್ಸವವು 34 ನೆಕ್ಕಿಲಾಡಿಯ ಆದರ್ಶನಗರದ ಸೀಮಾ ಕಾಂಪೌಂಡ್‌ನಲ್ಲಿ ನಡೆಯಿತು.




ಎಸ್‌ಡಿಪಿಐಯ ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷ ಮುಸ್ತಫಾ ಲತೀಫೀ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ, ಪಕ್ಷದ ಸದಸ್ಯ ನಝೀರ್ ಕೋಡಿಂಬಾಡಿ ಗುಂಡು ಎಸೆತದ ಮೂಲಕ ಕ್ರೀಡೋತ್ಸವ ಉದ್ಘಾಟಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.





ಎತ್ತರ ಜಿಗಿತ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಐದನೇ ಸ್ಥಾನ ಪಡೆದ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಹ್ಸನ್ ವದೂದ್ ಈ ಸಂದರ್ಭ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ, ಅಡ್ವೋಕೇಟ್ ಅಶ್ರಫ್ ಅಗ್ನಾಡಿ, ವಕೀಲರಾದ ರಹಿಮಾನ್ ಬಂಡಾಡಿ, ನೌಶಾದ್ ಕೆ.ಎ., ಹಮೀದ್ ಪರನೀರು, ಎಸ್‌ಡಿಪಿಐಯ ಬ್ಲಾಕ್ ಕಾರ್ಯದರ್ಶಿ ಅನ್ವರ್ ಆದರ್ಶನಗರ, ಉದ್ಯಮಿ ನೌಶಾದ್ ಕರ್ವೇಲ್, ಸತ್ತಾರ್ ಕರ್ವೇಲ್, ಯೂಸುಫ್ ಬೇರಿಕೆ, ಸಲೀಂ ಕೊಡಿಪ್ಪಾಡಿ, ಆರೀಸ್ ಅಗ್ನಾಡಿ, ಆಸೀಫ್ ಅದರ್ಶನಗರ, ಅಬ್ದುಲ್ ಖಾದರ್ ಉಪಸ್ಥಿತರಿದ್ದರು. ಪಕ್ಷದ ಹಿರಿಯ ಮುಖಂಡ ಅಬ್ದುಲ್ ರಝಾಕ್ ಸೀಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಝಕಾರಿಯಾ ಕೊಡಿಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.









