ಪುತ್ತೂರು: ದರ್ಬೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿಧಿ ಬೋರ್‌ವೆಲ್ಸ್ ಮತ್ತು ಆಗ್ರೋ ಸರ್ವಿಸಸ್‌ನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಡಿ.9ರಂದು ಪೂಜಾ ಕಾರ್ಯಕ್ರಮ ನಡೆಯಿತು. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಅರ್ಚಕರಾದ ವೇ.ಮೂ.ಜಯರಾಮ ಜೋಯಿಷರು ಪೂಜಾ ವಿಧಿ ವಿಧಾನ ನೆರವೇರಿಸಿದರು.

ಸಂಸ್ಥೆಯ ಮಾಲಕರಾದ ಪಿ. ಗೋಪಾಲಕೃಷ್ಣ, ಈಶ್ವರ ಭಟ್ ಕಂಬಳಿಮೂಲೆ ಹಾಗೂ ಸಿಬಂದಿಗಳು, ಹಿತೈಷಿಗಳು ಉಪಸ್ಥಿತರಿದ್ದರು. ಮಾಲಕರು ಮಾತನಾಡಿ ಕೃಷಿಕರಿಗೆ ಉತ್ತಮ ಗುಣಮಟ್ಟದಲ್ಲಿ, ಸ್ಪರ್ಧಾತ್ಮಕ ದರದಲ್ಲಿ ಬೋರ್‌ವೆಲ್ ಕೊರೆಸಿಕೊಡಲಾಗುವುದು. ಕೃಷಿಕರಿಗೆ ಹಾಗೂ ವಾಣಿಜ್ಯೋದ್ಯಮಿಗಳಿಗೆ ಬೇಕಾದ ಹೋಂಡಾ, ಎಕ್ಸಲೆಂಟ್, ಪೆಲಿಕಾನ್, ಆಲ್ಫಾ ಸ್ವಿಫ್ಟ್ ಮೊದಲಾದ ಬ್ರಾಂಡೆಡ್ ಕಂಪೆನಿಯ ಜನರೇಟರ್‌ಗಳು 1 ಕೆ.ವಿ.ಯಿಂದ 13 ಕೆ.ವಿ.ರವರೆಗೆ ರೂ.20 ಸಾವಿರದಿಂದ 3 ಲಕ್ಷದವರೆಗೆ ಲಭ್ಯವಿದೆ. ಅಲ್ಲದೆ ಜನರೇಟರ್‌ಗಳ ಸರ್ವಿಸ್ ಕೂಡ ಲಭ್ಯವಿದೆ ಎಂದರು.