ಅಧ್ಯಕ್ಷ: ರಾಜು ಪೂಜಾರಿ ಬಳಂತಿಮೊಗರು, ಕಾರ್ಯದರ್ಶಿ: ಮಕರಂದ ಸರವು
ಪುಣಚ: ಪುಣಚ ಗ್ರಾಮದ ಬಳಂತಿಮೊಗರುನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಫೆ.25-26ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಭಕ್ತರ ಸಭೆ ಹಾಗೂ ವಿವಿಧ ಸಮಿತಿ ರಚನೆ ಡಿ.9ರಂದು ಮೂಡಂಬೈಲು ಮಹಿಷಮರ್ದಿನಿ ಭಜನಾ ಮಂದಿರದ ವೈಭವಿ ಕಲಾಭವನದಲ್ಲಿ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ರಾಜು.ಬಿ. ಪೂಜಾರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಕರಂದ ಸರವು ರವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಪುಣಚ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗನ್ನಾಥ ಶಾಲಿಯಾನ್, ಉಪಾಧ್ಯಕ್ಷರಾಗಿ ಸಂಜೀವ ಪೂಜಾರಿ ವಿಟ್ಲ, ಮೋನಪ್ಪ ಸುವರ್ಣ ಮೂಡಂಬೈಲು, ಗುರುವಪ್ಪ ಪೂಜಾರಿ ದಲ್ಕಾಜೆಗುತ್ತು, ಶಿವರಾಮ ನಾಯ್ಕ ಪಾವಲುಮೂಲೆ , ಶಿವಪ್ಪ ಪೂಜಾರಿ ಎಣ್ಮಕಜೆ, ಸತ್ಯ ಪಿ ಶೆಟ್ಟಿ, ಭವ್ಯ ಮೋಹನ ಹಿತ್ತಿಲು, ಕಾರ್ಯದರ್ಶಿಯಾಗಿ ಶ್ರೀಲತಾ, ಜೊತೆ ಕಾರ್ಯದರ್ಶಿಯಾಗಿ ಶ್ರೀನಿವಾಸ ಬಳಂತಿಮೊಗರು, ಸೌಮ್ಯ ಬಿ, ಕೋಶಾಧಿಕಾರಿಯಾಗಿ ವಿಶ್ವನಾಥ ಬರೆ, ಸಂಚಾಲಕರಾಗಿ ಜಯರಾಮ ರೈ ಮೂಡಂಬೈಲು, ಶ್ರೀಲತಾ ಬಿ ಯವರನ್ನು ಆಯ್ಕೆಮಾಡಲಾಯಿತು. ಹಾಗೂ ವಿವಿಧ ಉಪ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಭಕ್ತರ ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ಗರಡಿಯ ಆಡಳಿತ ಸಮಿತಿ ಅಧ್ಯಕ್ಷ ಶ್ರೀಧರ ಬಾಳೆಕಲ್ಲು ಮಾತನಾಡಿ, ಊರ ಪರ ಊರ ಭಕ್ತಾದಿಗಳ ಸಹಕಾರದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು ಮುಂಬರುವ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನೆರವೇರುವಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಿ ಸಹಕರಿಸುವಂತೆ ವಿನಂತಿಸಿದರು.
ಕಣಿಹಿತ್ತಿಲು ಬಂಗೇರ ತರವಾಡಿನ ಕೊರಗಪ್ಪ ಗುರುಸ್ವಾಮಿ ಕಾಸರಗೋಡು, ದೊಡ್ಡಮನೆ ಸುವರ್ಣ ತರವಾಡಿನ ಅಧ್ಯಕ್ಷ ಶಿವಪ್ಪ ಪೂಜಾರಿ ಎಣ್ಮಕಜೆ, ಮೂಡಂಬೈಲು ತರವಾಡಿನ ರಘುನಾಥ ರೈ, ಬಳಂತಿಮೊಗರು ತರವಾಡಿನ ಮೋನಪ್ಪ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಅನಂತ ಪ್ರಸಾದ್, ವಿಟ್ಲ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ನರಸಪ್ಪ ಪೂಜಾರಿ, ಗರಡಿಯ ಆಡಳಿತ ಮೊಕ್ತೇಸರರಾದ ಕಾಂತಪ್ಪ ಬಂಗೇರ ಸೇರಿದಂತೆ ಹಲವಾರು ಭಕ್ತಾದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು. ಹರಿಚಂದ್ರ ಬಳಂತಿಮೊಗರು ಸ್ವಾಗತಿಸಿ,ವಂದಿಸಿದರು. ರವಿಚಂದ್ರ ಬಳಂತಿಮೊಗರು ಕಾರ್ಯಕ್ರಮ ನಿರೂಪಿಸಿದರು.
