




ಗಡಿ ಭಾಗದ ಶಾಲೆ, ಮಾದರಿ ಶಾಲೆಯಾಗಿ ಬೆಳಗಲಿ- ರವೀಂದ್ರ ಮಣಿಲತ್ತಾಯ




ಬಡಗನ್ನೂರು : ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ, ಹಿರಿಯ ವಿದ್ಯಾರ್ಥಿಗಳ, ಶಿಕ್ಷಕರ, ಪೋಷಕರ ಕ್ರೀಡಾಕೂಟ- ಸರ್ವೋದಯ ಕ್ರೀಡಾ ಸಿಂಚನ 2025ವು ಡಿ. 6ರಂದು ಸರ್ವೋದಯ ಕ್ರೀಡಾಂಗಣದಲ್ಲಿ ನಡೆಯಿತು.






ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಮಣಿಲತ್ತಾಯ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕೇರಳ ಕರ್ನಾಟಕ ಗಡಿ ಭಾಗದಲ್ಲಿರುವ ಶಾಲೆ ಪಠ್ಯ ಜೊತೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಗುಣ ಮಟ್ಟದ ಶಿಕ್ಷಣದ ಜೊತೆ ಮಾದರಿ ಶಾಲೆಯಾಗಿ ಬೆಳಗಲಿ ಎಂದು ಹೇಳಿ ಶುಭ ಹಾರೖೆಸಿದರು.
ಮಂಗಳೂರು ಬಂದರು ಠಾಣೆಯ ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಬಿ. ರವೀಂದ್ರನಾಥ ರೈ ಬೋಳಂಕೂಡ್ಲು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಶುಭ ಹಾರೈಸಿದರು. ಮಂಜುನಾಥ ರೋಡ್ ಲೈನ್ಸ್ ಮಾಲಕ ರವಿಶಂಕರ ಯಾದವ, ಬಜ ಇವರು ಕ್ರೀಡಾಜ್ಯೋತಿ ಪ್ರಜ್ವಲನೆ ಮಾಡಿದರು.
ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶಿವರಾಮ ಎಚ್.ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಪ್ತ ಪ್ರತಿಭೆಗಳ ಹೊರ ತರುವ ಪ್ರಯತ್ನ ಕ್ರೀಡಾಕೂಟ ಸಾಧ್ಯವಾಗುತ್ತದೆ. ದೈಹಿಕ ಬಲ, ಮಾನಸಿಕ ಸಮತೋಲನ ಕಾಪಾಡಲು ಕ್ರೀಡೆ ಸಹಕಾರಿ. ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಹೇಳಿದರು.

ವಿದ್ಯಾರ್ಥಿ ಶ್ರವಿತ್ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳಿಂದ ಎ ರೋಬಿಕ್ಸ್, ಕವಾಯತು, ಪಥ ಸಂಚಲನ ನಡೆಯಿತು.
ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಯ ನಿವೃತ್ತ ನೌಕರರಾದ ಮಹಾಲಿಂಗ ಮೂಲ್ಯ ಸಿ.ಎಚ್, ಶಾಲಾ ಸಂಚಾಲಕ ಮಹಾದೇವ ಭಟ್ ಕೊಲ್ಯ, ನಿರ್ದೇಶಕರಾದ ಸುಬ್ರಮಣ್ಯ ಭಟ್, ಗುರುಪ್ರದೀಪ್ ಕನ್ನಡ್ಕ, ಸುಬ್ರಮಣ್ಯ ಭಟ್ ಪಾದೆಗದ್ದೆ, ದಾನಿಗಳಾದ ಗಂಗಾಧರ ರೈ, ಚನಿಯಪ್ಪ ನಾಯ್ಕ, ವೇಟ್ ಲಿಫ್ಟಿಂಗ್ ತರಬೇತುದಾರ ಕೃಷ್ಣಪ್ಪ ಗೌಡ, ರಾಷ್ಟ್ರೀಯ ವಾಲಿಬಾಲ್ ಆಟಗಾರ ಗಣೇಶ್ ರೈ ಮುಂಡಾಸು ಉಪಸ್ಥಿತರಿದ್ದರು.
ಶಿಕ್ಷಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ಆನಂದಪಾದೆ ಗದ್ದೆ, ಮಕ್ಕಳ ಸುರಕ್ಷಾ ಸಮಿತಿ ಅಧ್ಯಕ್ಷ ಪ್ರಕಾಶ್ ಮರದ ಮೂಲೆ ಬಲೂನ್ ನ್ನು ಆಕಾಶಕ್ಕೆ ಹಾರಿಸಿದರು.
ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಸುಖೇಶ್ ರೈ ಸ್ವಾಗತಿಸಿದರು.ಶಿಕ್ಷಕಿ ಶೃತಿರಂಜಾನ್ ವಂದಿಸಿದರು. ಸಹ ಶಿಕ್ಷಕಿ ಪ್ರಶಾಂತಿ ರೈ ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಳು ಆಶಯ ಗೀತೆಯನ್ನು ಹಾಡಿದರು.

ನೆಟ್ಟಣಿಗೆ ಮುಡ್ನೂರು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೇವಿಪ್ರಕಾಶ್ ಕ್ರೀಡಾ ಪ್ರತಿಭೆಗಳನ್ನು ಗೌರವಿಸಿ ಮಾತನಾಡಿ ಶಾಲೆಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ವಿವಿಧ ರೀತಿಗಳಲ್ಲಿ ಸಂಯೋಜನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಶಾಲೆಯ ಹಿರಿಮೆ ಮತ್ತಷ್ಟು ಬೆಳಗಲಿ ಎಂದು ಶುಭ ಹಾರೈಸಿದರು.ಶಾಲಾ ವಿದ್ಯಾರ್ಥಿಗಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.










