




ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಮಾಡನ್ನೂರು ನೂರುಲ್ ಹುದಾ ಸಂಸ್ಥೆಯ ವತಿಯಲ್ಲಿ ನಡೆದ “ಆಲ್ ಕರ್ನಾಟಕ ನೂರುಲ್ ಹುದಾ ಕ್ವಿಜ್ ಟಾಲೆಂಟ್ ಶೋ” ನಲ್ಲಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.





ಐದನೇ ತರಗತಿಯ ಅಬ್ದುಲ್ ಹಿಶಾಂ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ರೂ 10,001 ನಗದು ಬಹುಮಾನ ಪಡೆದಿದ್ದಾರೆ. ನಾಲ್ಕನೇ ತರಗತಿಯ ಮುಹಮ್ಮದ್ ಝಿದಾನ್ ರಝಾ ಅವರು ದ್ವಿತೀಯ ಸ್ಥಾನ ಪಡೆದು ರೂ.7,001 ನಗದು ಬಹುಮಾನ ಪಡೆದಿದ್ದಾರೆ.














