ಪುತ್ತೂರು: ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯು ಡಿ.7ರಂದು ಬಿಡುಗಡೆಗೊಂಡಿತು.
ಅರ್ಚಕರಾದ ನಾರಾಯಣ ಭಟ್ ವಡ್ಯ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಶ್ಯಾಮ ನಾರಾಯಣ ಜತ್ತನಕೋಡಿ, ಟ್ರಸ್ಟಿಗಳಾದ ಅನಂತಕೃಷ್ಣ ಮುಗ್ರಜೆ, ಗಿರಿಶಂಕರ್ ಕೈಲಾರ್, ವಸಂತ ಭಟ್ ಕುದುಮಾನು, ರಾಮಕೃಷ್ಣ ಭಟ್ ಪುಂಜತ್ತೋಡಿ, ಶ್ರೀಶ ಭಟ್ ಮುದ್ರಜೆ, ಈಶ್ವರ ಜೋಯಿಸ ಅಂಗರಾಜೆ, ರಘು ಅಜಿಲ ಮಿತ್ತಿಲ, ತಿಮ್ಮಪ್ಪ ಎಂ.ಕೆ., ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಭಟ್ ಬಡೆಕ್ಕಿಲ, ಉಪಾಧ್ಯಕ್ಷರಾದ ವೆಂಕಟಕೃಷ್ಣ ವಲಂಕುಮೇರಿ, ಶಿವಕುಮಾರ್ ಪೇರಮೋಗ್ರು ಹಾಗೂ ಪದಾಧಿಕಾರಿಗಳಾದ ರಾಮಕೃಷ್ಣ ಭಟ್ ಜತ್ತನಕೋಡಿ, ನಿರಂಜನ ಭಟ್, ಜ್ಯೇಷ್ಠರಾಜ ಅಂಗರಾಜೆ, ವೆಂಕಟರಾಜ್ ಬಡೆಕ್ಕಿಲ, ಹರೀಶ್ ಕಜೆ ಮೊದಲಾದವರು ಉಪಸ್ಥಿತರಿದ್ದರು.
